ಕೌಶಲ್ಯ ಅಭಿವೃದ್ಧಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡುಗೆ ಆಂಧ್ರ ಪ್ರದೇಶ ಹೈಕೋರ್ಟ್ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಸ್ಕಿಲ್ ಹಗರಣ ಸಂಬಂಧ ಹೈಕೋರ್ಟ್ ಸೂಚನೆ ಮೇರೆಗೆ ಸಿಐಡಿ ಪೊಲೀಸರು ಚಂದ್ರಬಾಬು ನಾಯ್ಡುರನ್ನು ಇತ್ತೀಚೆಗೆ ಬಂದಿಸಿದ್ದರು. ಇದೀಗ ಚಂದ್ರಬಾಬು ನಾಯ್ಡುಗೆ ಹೈಕೋರ್ಟ್ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.ಚಂದ್ರಬಾಬು ನಾಯ್ಡು ಅವರನ್ನು ಸೋಮವಾರದವರೆಗೆ ಬಂಧಿಸದಂತೆ ಆಂಧ್ರಪ್ರದೇಶ ಹೈಕೋರ್ಟ್ ಬುಧವಾರ ಸಿಐಡಿಗೆ ನಿರ್ದೇಶನ ನೀಡಿದೆ. ನಾಳೆಯ ವಿಚಾರಣೆಯವರೆಗೆ ಅಂಗಲ್ಲು ಹಿಂಸಾಚಾರ ಪ್ರಕರಣದಲ್ಲಿ ನಾಯ್ಡು ಅವರನ್ನು ಬಂಧಿಸದಂತೆ ಹೈಕೋರ್ಟ್ ಪೊಲೀಸರಿಗೆ ಸೂಚಿಸಿದೆ.
ಅಮರಾವತಿ ಇನ್ನರ್ ರಿಂಗ್ ರೋಡ್ ಪ್ರಕರಣದಲ್ಲಿ (ಟಿಡಿಪಿ) ಮುಖ್ಯಸ್ಥ ಚಂದ್ರಬಾಬು ನಾಯ್ಡುರನ್ನು ಬಂಧಿಸಲಾಗಿತ್ತು.