BREAKING : ಜನತಾ ದರ್ಶನಕ್ಕೆ ಕುಳಿತಿದ್ದ ಜಾಗದಲ್ಲೇ ಬೇಗನೆ ಊಟ ಮಾಡಿ ಮುಗಿಸಿದ ಸಿಎಂ ಸಿದ್ದರಾಮಯ್ಯ!

ಬೆಂಗಳೂರು :  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರ್ವಜನಿಕರ ಅಹವಾಲುಗಳಿಗೆ ತ್ವರಿತ ಪರಿಹಾರ ಒದಗಿಸುವ ಆಶಯದೊಂದಿಗೆ ಇಂದು  ಬೆಳಗ್ಗೆ 9.30ರಿಂದ ಇಡೀ ದಿನ ಗೃಹ ಕಚೇರಿ ಕೃಷ್ಣಾದಲ್ಲಿ ಜನತಾ ದರ್ಶನ ಕಾರ್ಯಕ್ರಮ ಆಯೋಜಿಸಿದ್ದು, ರಾಜ್ಯದ ಮೂಲೆಮೂಲೆಗಳಿಂದ ಬೃಹತ್ ಸಂಖ್ಯೆಯಲ್ಲಿ ಜನರು ಆಗಮಿಸಿದ್ದಾರೆ.

ಈ ನಡುವೆ ಇಂದು ಮಧ್ಯಾಹ್ನ ಸಿಎಂ ಸಿದ್ದರಾಮಯ್ಯ ಜನತಾ ದರ್ಶನಕ್ಕೆ ಕುಳಿತಿದ್ದ ಜಾಗದಲ್ಲೇ ಊಟ ಮಾಡಿ ಮತ್ತೆ ಜನತಾ ದರ್ಶನಕ್ಕೆ ಮುಂದಾಗಿದ್ದಾರೆ.

ಇಂದಿನ ಜನತಾ ದರ್ಶನದಲ್ಲಿ ಅಹವಾಲು ಹೊತ್ತು ಬಂದವರ ಸಂಖ್ಯೆ ಬಹಳಷ್ಟಿದೆ. ದೂರದ ಊರುಗಳಿಂದ ಬಂದ ಪ್ರತಿಯೊಬ್ಬರ ಸಮಸ್ಯೆಗಳನ್ನು ಆಲಿಸಿ, ಪರಿಹರಿಸಿಕೊಡಬೇಕಾದುದ್ದು ನನ್ನ ಕರ್ತವ್ಯ. ಹೀಗಾಗಿ ಊಟಕ್ಕೆ ಹೋಗಿ ಬರುವ ಸಮಯವನ್ನು ಉಳಿಸಿ, ಆ ಸಮಯವು ಮತ್ತಷ್ಟು ಜನರ ಕಷ್ಟ ಕೇಳಲು ಸದ್ಬಳಕೆಯಾಗಲಿ ಎಂದು ಜನತಾ ದರ್ಶನಕ್ಕೆ ಕುಳಿತಿದ್ದ ಜಾಗದಲ್ಲೇ ಬೇಗನೆ ಊಟ ಮಾಡಿ ಮುಗಿಸಿ ಮತ್ತೆ ಜನರ ಅಹವಾಲಿಗೆ ಕಿವಿಯಾಗಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read