BREAKING : ಸಿಎಂ ಜನತಾ ದರ್ಶನ : ಮಗನಿಗೆ ಕಿಡ್ನಿ ಸಮಸ್ಯೆ ಇದೆ ವರ್ಗಾವಣೆ ಮಾಡಿ ಎಂದು ಕಣ್ಣೀರಿಟ್ಟ ಶಿಕ್ಷಕ

ಬೆಂಗಳೂರು : ಬೆಂಗಳೂರಿನಲ್ಲಿ ಸಿಎಂ ಜನತಾ ದರ್ಶನ ನಡೆಯುತ್ತಿದ್ದು, ಸಾರ್ವಜನಿಕರು ತಮ್ಮ ತಮ್ಮ ಅಹವಾಲು, ದೂರುಗಳನ್ನು ಸಲ್ಲಿಸುತ್ತಿದ್ದಾರೆ.

ಮಗನಿಗೆ ಕಿಡ್ನಿ ಸಮಸ್ಯೆ ಇದೆ ವರ್ಗಾವಣೆ ಮಾಡಿ ಎಂದು ಶಿಕ್ಷಕರೊಬ್ಬರು ಸಿಎಂ ಬಳಿ ಕಣ್ಣೀರಿಟ್ಟಿದ್ದಾರೆ.
ಹಾಸನ ಜಿಲ್ಲೆ ಅರಸೀಕೆರೆಯಲ್ಲಿ ಹೈಸ್ಕೂಲ್ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕರೊಬ್ಬರು ತಮ್ಮನ್ನು ಕನಕಪುರಕ್ಕೆ ವರ್ಗಾವಣೆ ಮಾಡಿಕೊಡುವಂತೆ ಮನವಿ ಸಲ್ಲಿಸಿದ್ದಾರೆ. ನನ್ನ ಮಗನಿಗೆ ಕಿಡ್ನಿ ಸಮಸ್ಯೆ ಇದೆ. ಟ್ರೀಟ್ ಮೆಂಟ್ ಗೋಸ್ಕರ ಕನಕಪುರಕ್ಕೆ ಪ್ರತಿ ಸಾರಿ ಹೋಗಬೇಕು, ಆಸ್ಪತ್ರೆ ಇದ್ದ ಕಡೆ ವರ್ಗಾವಣೆ ಮಾಡಿಕೊಡಿ ಎಂದು ಶಿಕ್ಷಕರೊಬ್ಬರು ಸಿಎಂ ಬಳಿ ಕಣ್ಣೀರಿಟ್ಟಿದ್ದಾರೆ.ಶಿಕ್ಷಕನ ಅಹವಾಲು ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ ತಕ್ಷಣ ವರ್ಗಾವಣೆ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮಹಿಳೆಯೊಬ್ಬರು ನನ್ನ ಮಗನ ಆಪರೇಷನ್ ಗೆ ಸಹಾಯ ಮಾಡಿ ಸಿಎಂ ಬಳಿ ಮನವಿ ಸಲ್ಲಿಸಿದ್ದಾರೆ. ಅದೇ ರೀತಿ ಲೈನ್ ಮ್ಯಾನ್ ಒಬ್ಬರು ಕೆಲಸ ಮಾಡುವಾಗ ನನ್ನ ಕೈ ಹೋಗಿದೆ. ಇದಕ್ಕೆ ಪರಿಹಾರ ಕೊಡಿಸಿ ಎಂದು ಮನವಿ ಮಾಡಿದ್ದಾರೆ. ಹೀಗೆ ಹಲವಾರು ಸಮಸ್ಯೆ, ದೂರುಗಳನ್ನು ಹೊತ್ತ ಸಾರ್ವಜನಿಕರು ಸಿಎಂ ಬಳಿ ದೂರು, ಅಹವಾಲು ಸಲ್ಲಿಸಿ ಸಹಾಯಕ್ಕಾಗಿ ಮೊರೆ ಇಡುತ್ತಿರುವ ದೃಶ್ಯಗಳು ಕಂಡು ಬಂದಿತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read