BREAKING : ರಾತ್ರೋರಾತ್ರಿ ಬೆಳಗಾವಿ ‘ಬಿಜೆಪಿ ಕಾರ್ಪೊರೇಟರ್’ ಬಂಧನ : ಹಿಂಡಲಗಾ ಜೈಲಿಗೆ ಶಿಫ್ಟ್

ಬೆಳಗಾವಿ : ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಪಾಲಿಕೆ ಬಿಜೆಪಿ ಸದಸ್ಯ ಅಭಿಜಿತ್ ಜವಳಕರ್ ನನ್ನು ಬಂಧಿಸಲಾಗಿದೆ.

ನವೆಂಬರ್ 23ರಂದು ಮೊಬೈಲ್ ಟವರ್ ಅನುಮತಿ ವಿಚಾರಕ್ಕೆ ಬೆಳಗಾವಿಯ ಭಾಗ್ಯನಗರದಲ್ಲಿನ ಗಲಾಟೆ ನಡೆದಿತ್ತು. ಈ ಸಂಬಂಧ ಹಲ್ಲೆ ಮಾಡಿದ್ದ ರಮೇಶ್ ಪಾಟೀಲ್ ಎಂಬಾತನನ್ನು ಬಂಧಿಸಲಾಗಿತ್ತು. ಈ ಸಂಬಂಧ ಅಭಿಜಿತ್ ಜವಳಕರ್ ನನ್ನು ಕೂಡ ಬಂಧಿಸುವಂತೆ ಎಂಇಎಸ್ ಕಾರ್ಯಕರ್ತರು ನಿನ್ನೆ ಪ್ರತಿಭಟನೆ ನಡೆಸಿದ್ದರು. ಈ ಬೆನ್ನಲ್ಲೇ ಅವರನ್ನು ಬಂಧಿಸಲಾಗಿದೆ.

ಬೆಳಗಾವಿಯಲ್ಲಿ ಪಾಲಿಕೆ ಸದಸ್ಯ ಅಭಿಜಿತ್ ಬಂಧನ ಆಗುತ್ತಿದ್ದಂತೆ ಅನಿಲ್ ಬೆನಕೆ ಅವರಿಗೆ ಕರೆ ಮಾಡಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಟಿಳಕವಾಡಿ ಪೊಲೀಸರು ತಡರಾತ್ರಿ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲಾಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read