ಬೆಂಗಳೂರು : ನಟಿ ರನ್ಯಾರಾವ್ ಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದ್ದು, ವಿಚ್ಚೇದನ ಕೋರಿ ಕೋರ್ಟ್’ಗೆ ಅರ್ಜಿ ಸಲ್ಲಿಸಲು ಪತಿ ನಿರ್ಧರಿಸಿದ್ದಾರೆ.
ಹೌದು, ಅಕ್ರಮ ಚಿನ್ನ ಸಾಗಾಣಿಕೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟಿ ರನ್ಯಾರಾವ್ ನಿಂದ ಅಂತರ ಕಾಯ್ದುಕೊಳ್ಳಲು ಪತಿ ಜತಿನ್ ಹುಕ್ಕೇರಿ ನಿರ್ಧರಿಸಿದ್ದು, ವಿಚ್ಚೇದನ ಕೋರಿ ಕೋರ್ಟ್ ಗೆ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿದೆ. ಮದುವೆ ಆದಾಗಿನಿಂದ ರನ್ಯಾಳಿಂದ ಒಂದಲ್ಲ ಇಂದು ತೊಂದರೆ ಆಗುತ್ತಿರುವ ಹಿನ್ನೆಲೆ ಅಂತರ ಕಾಯ್ದುಕೊಂಡಿರುವ ಜತಿನ್ ಜಾಮೀನು ಕೋರಿ ಅರ್ಜಿ ಸಲ್ಲಿಸಲು ಸಿದ್ದತೆ ನಡೆಸಿದ್ದಾರೆ. ಜಾಮೀನು ವಜಾ ಟೆನ್ಶನ್ ನಲ್ಲಿರುವ ರನ್ಯಾಗೆ ಮತ್ತೊಂದು ಶಾಕ್ ಎದುರಾಗಿದೆ.
ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಜಾಮೀನು ಕೋರಿ ಹೈಕೋರ್ಟ್ ಗೆ ನಟಿ ರನ್ಯಾರಾವ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಹೌದು, ಸೆಷನ್ಸ್ ಕೋರ್ಟ್ ಜಾಮೀನು ಅರ್ಜಿ ತಿರಸ್ಕರಿಸಿದ ಹಿನ್ನೆಲೆ ರನ್ಯಾರಾವ್ ಪರ ವಕೀಲರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಬೇಲ್ ಸಿಗುವ ನಿರೀಕ್ಷೆಯಲ್ಲಿದ್ದ ಚಿನ್ನದ ಬೆಡಗಿಗೆ ಶಾಕ್ ಎದುರಾಗಿದೆ, ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ನಟಿ ರನ್ಯಾಗೆ ಜೈಲೇ ಗತಿಯಾಗಿದ್ದು, ನಟಿ ಬೇಲ್ ಅರ್ಜಿ ವಜಾಗೊಳಿಸಿದ 64ನೇ ಸೆಷನ್ಸ್ ಕೋರ್ಟ್ ಆದೇಶ ಹೊರಡಿಸಿದೆ.
ನಟಿಗೆ ಬೇಲ್ ನೀಡದಂತೆ ವಾದಿಸಿದ್ದ DIR ಪರ ವಕೀಲರು ಆರೋಪಿ ಪ್ರಭಾವಿಯಾಗಿದ್ದು, ಬೇಲ್ ನೀಡಿದ್ರೆ ಸಾಕ್ಷಿ ನಾಶ ಸಾಕ್ಷಿಗಳಿಗೆ ಬೆದರಿಕೆ ಸಾಧ್ಯತೆ ಎಂದು ವಾದ ಮಾಡಿದ್ದರು. ಈ ಹಿನ್ನೆಲೆ ಅವರು ಹೈಕೋರ್ಟ್ ಮೊರೆ ಹೋಗಿದ್ದಾರೆ.