BREAKING : ಗಾಝಾದ ಖಾನ್ ಯೂನಿಸ್ ಬಳಿ `IDF’ ವೈಮಾನಿಕ ದಾಳಿ: ಒಂದೇ ಕುಟುಂಬದ 11 ಮಂದಿ ಸಾವು

ಇಂದು  ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದ 43 ನೇ ದಿನ. ಇಸ್ರೇಲ್ ನಿಂದ ಗಾಝಾ ಮೇಲೆ ವಿನಾಶಕಾರಿ ದಾಳಿಗಳು ಅಡೆತಡೆಯಿಲ್ಲದೆ ಮುಂದುವರೆದಿವೆ. ವಾಯು ದಾಳಿಯಿಂದಾಗಿ, ಗಾಜಾದ ಅನೇಕ ನಗರಗಳಲ್ಲಿನ ಕಟ್ಟಡಗಳು ನೆಲಸಮವಾಗಿವೆ ಮತ್ತು ಹೆಚ್ಚಿನ ಸಂಖ್ಯೆಯ ಜನರು ಸಾವನ್ನಪ್ಪಿದ್ದಾರೆ.

ಹಮಾಸ್ ಮತ್ತು ಅದರ ನೆಲೆಗಳನ್ನು ಸಂಪೂರ್ಣವಾಗಿ ನಾಶಪಡಿಸುವವರೆಗೂ ಯುದ್ಧಕ್ಕೆ ಪೂರ್ಣ ವಿರಾಮ ಹಾಕುವುದಿಲ್ಲ ಎಂದು ಇಸ್ರೇಲ್ ಈಗಾಗಲೇ ಸ್ಪಷ್ಟಪಡಿಸಿದೆ. ಏತನ್ಮಧ್ಯೆ, ಇಸ್ರೇಲ್  ಮತ್ತೆ ವಾಯು ದಾಳಿ ನಡೆಸಿತು. ಗಾಝಾದ ದಕ್ಷಿಣ ನಗರದಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಒಂದೇ ಕುಟುಂಬದ ಕನಿಷ್ಠ 11 ಸದಸ್ಯರು ಸಾವನ್ನಪ್ಪಿದ್ದಾರೆ.

ದಕ್ಷಿಣ  ಗಾಜಾದ ಖಾಸ್ ಯೂನಿಸ್ ನಲ್ಲಿ ಈ ವೈಮಾನಿಕ ದಾಳಿ ನಡೆಸಲಾಗಿದೆ. ಮೃತ ಕುಟುಂಬವು ಗಾಝಾದ ಮುಖ್ಯ ನಗರದಲ್ಲಿ ನಡೆದ ದಾಳಿಯಿಂದ ತಪ್ಪಿಸಿಕೊಳ್ಳಲು ದಕ್ಷಿಣ ಗಾಝಾಗೆ ಬಂದಿತ್ತು. ಆದರೆ, ಇಲ್ಲಿಯೂ ಇಸ್ರೇಲಿ ವಾಯುದಾಳಿಯಲ್ಲಿ ಒಂದೇ ಕುಟುಂಬದ 11 ಸದಸ್ಯರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಮಕ್ಕಳು ಮತ್ತು ನವಜಾತ ಶಿಶುಗಳು ಸೇರಿವೆ.

ಫೆಲೆಸ್ತೀನ್ ಸಚಿವಾಲಯದ ಪ್ರಕಾರ, ಇಲ್ಲಿಯವರೆಗೆ ಒಟ್ಟು ಸತ್ತವರ ಸಂಖ್ಯೆಯಲ್ಲಿ 4700 ಕ್ಕೂ ಹೆಚ್ಚು ಮಕ್ಕಳು ಮತ್ತು 3100 ಕ್ಕೂ ಹೆಚ್ಚು ಮಹಿಳೆಯರು ಸಾವನ್ನಪ್ಪಿದ್ದಾರೆ. ಈ  ಅಂಕಿಅಂಶಗಳನ್ನು ಕಳೆದ ವಾರ ಬಿಡುಗಡೆ ಮಾಡಲಾಗಿದೆ. ಗಾಝಾ ನಗರದ ಶಿಫಾ ಆಸ್ಪತ್ರೆಯಲ್ಲಿರುವ ಪ್ಯಾಲೆಸ್ತೀನ್ ಸಚಿವಾಲಯದ ಅಧಿಕಾರಿಗಳು ವಿದ್ಯುತ್ ಕಡಿತದಿಂದಾಗಿ ಅಂಕಿಅಂಶಗಳನ್ನು ಬಿಡುಗಡೆ ಮಾಡುವುದನ್ನು ನಿಲ್ಲಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read