ಬೆಂಗಳೂರು: ನಾವು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದರು. ಕಳೆದ ಒಂದು ತಿಂಗಳ ಅವಧಿಯಲ್ಲಿ ಭ್ರಷ್ಟಾಚಾರದ ವಿರುದ್ಧ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ, ಸಿಎಂ ಕಚೇರಿ ವಿರುದ್ಧ ಗಂಭೀರ ಆರೊಪ ಮಾಡಿದ್ದಾರೆ. ಶಾಸಕರು ಶಿಫಾರಸು ಪರ ತಂದ್ರೆ ಸಾಲದು, ಅದರ ಜೊತೆ ದುಡ್ಡು ತನ್ನಿ ಎನ್ನುತ್ತಾರೆ ಎಂದು ಆರೋಪಿಸಿದ್ದಾರೆ.
ಶಾಸಕರು ಶಿಫಾರಸು ಪತ್ರ ತಂದರೆ ಸಾಲದು 30 ಲಕ್ಷ ದುಡ್ದು ತನ್ನಿ ಅಂತಾರಂತೆ. ಮುಖ್ಯಂತ್ರಿಗಳ ಕಚೇರಿಯಿಮ್ದ ಹಣಕ್ಕೆ ಡಿಮ್ಯಾಂಡ್ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. 30 ಲಕ್ಷ ಕೊಡದಿದ್ದರೆ ಸಿಎಂ ಕಚೇರಿಯಲ್ಲಿ ಕೆಲಸ ಆಗಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.