ಬೆಂಗಳೂರು: ವಿಧಾನಸಭಾ ಚುನಾವಣಾ ಮತ ಎಣಿಕೆ ಆರಂಭವಾಗಿದ್ದು, ಮೊದಲು ಅಂಚೆ ಮತಗಳ ಎಣಿಕೆ ಭರದಿಂದ ಸಾಗಿದೆ.
ಆರಂಭಿಕ ಮತ ಎಣಿಕೆಯಲ್ಲಿ ಘಟಾನುಘಟಿ ಸಚಿವರುಗಳೇ ಹಿನ್ನಡೆ ಸಾಧಿಸಿದ್ದು ಅಚ್ಚರಿ ಮೂಡಿಸಿದೆ.
ಚಿಕ್ಕಬಳ್ಳಾಪುರದಲ್ಲಿ ಸಚಿವ ಡಾ. ಸುಧಾಕರ್ ಗೆ ಹಿನ್ನಡೆಯಾಗಿದೆ. ನರಗುಂದದಲ್ಲಿ ಸಚಿವ ಸಿ.ಸಿ. ಪಾಟೀಲ್ ಅವರಿಗೂ ಹಿನ್ನಡೆಯಾಗಿದೆ. ಹೊಸಕೋಟೆಯಲ್ಲಿ ಸಚಿವ ಎಂಟಿಬಿ ನಾಗರಾಜ್ ಅವರಿಗೂ ಹಿನ್ನಡೆಯಾಗಿದೆ. ಕಾಂಗ್ರೆಸ್ ನ ಶರತ್ ಬಚ್ಚೇಗೌಡ ಮುನ್ನಡೆಯಲಿದ್ದಾರೆ.
ಬಳ್ಳಾರಿ ಗ್ರಾಮೀಣದಲ್ಲಿ ಸಚಿವ ಶ್ರೀರಾಮುಲುಗೆ ಹಿನ್ನಡೆಯಲ್ಲಿದ್ದಾರೆ. ಕಾಂಗ್ರೆಸ್ ನ ನಾಗೇಂದ್ರ ಮುನ್ನಡೆಯಲಿದ್ದಾರೆ. ಮುಧೋಳದಲ್ಲಿ ಸಚಿವ ಗೋವಿಂದ ಕಾರಜೋಳಗೆ ಹಿನ್ನಡೆಯಾಗಿದೆ.