ಮನುಷ್ಯನಿಗೆ ಮಾರ್ಪಡಿಸಿದ ಹಂದಿ ಕಿಡ್ನಿ ಕಸಿ ಮಾಡುವ ಮೂಲಕ ಸುದ್ದಿಯಾಗಿ, ಪ್ರಶಂಸೆ ಪಡೆದಿದ್ದ ಅಮೆರಿಕಾ ವೈದ್ಯರ ಸಾಧನೆಯ ಬೆನ್ನಲ್ಲೇ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಮಾರ್ಪಡಿಸಿದ ಹಂದಿ ಮೂತ್ರಪಿಂಡ ಕಸಿಗೆ ಒಳಗಾಗಿದ್ದ ಬೋಸ್ಟನ್ ನ 62 ವರ್ಷದ ವ್ಯಕ್ತಿ ಈ ಕಾರ್ಯವಿಧಾನಕ್ಕೆ ಒಳಗಾದ ಸುಮಾರು ಎರಡು ತಿಂಗಳ ನಂತರ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಅವರ ಕುಟುಂಬ ಮತ್ತು ಶಸ್ತ್ರಚಿಕಿತ್ಸೆ ನಡೆಸಿದ ಆಸ್ಪತ್ರೆ ಸ್ಪಷ್ಟಪಡಿಸಿದೆ.
ರಿಚರ್ಡ್ ರಿಕ್ ಸ್ಲೇಮನ್ 62 ನೇ ವಯಸ್ಸಿನಲ್ಲಿ ಮಾರ್ಚ್‌ನಲ್ಲಿ ಮ್ಯಾಸಚೂಸೆಟ್ಸ್ ಜನರಲ್ ಆಸ್ಪತ್ರೆಯಲ್ಲಿ ಹಂದಿ ಮೂತ್ರಪಿಂಡ ಕಸಿ ಮಾಡಿಸಿಕೊಂಡಿದ್ದರು. ಹಂದಿ ಮೂತ್ರಪಿಂಡವು ಕನಿಷ್ಠ ಎರಡು ವರ್ಷಗಳವರೆಗೆ ಇರುತ್ತದೆ ಎಂದು ಶಸ್ತ್ರಚಿಕಿತ್ಸಕರು ಹೇಳಿದ್ದರು.
ಮ್ಯಾಸಚೂಸೆಟ್ಸ್ ಜನರಲ್ ಆಸ್ಪತ್ರೆಯ ಮೂತ್ರಪಿಂಡ ಕಸಿ ತಂಡದ ಹೇಳಿಕೆಯಲ್ಲಿ ಸ್ಲೇಮನ್ ಅವರ ನಿಧನದಿಂದ ತೀವ್ರ ದುಃಖವಾಗಿದೆ ಮತ್ತು ಅವರ ಕುಟುಂಬಕ್ಕೆ ಸಾಂತ್ವನಗಳು. ಕಸಿಯ ಪರಿಣಾಮವಾಗಿ ಅವರು ಸಾವನ್ನಪ್ಪಿದ್ದಾರೆ ಎಂಬುದಕ್ಕೆ ಸ್ಪಷ್ಟನೆ ಇಲ್ಲ ಎಂದು ತಿಳಿಸಿದೆ.
ಈ ಹಿಂದೆ, ಹಂದಿಯ ಮೂತ್ರಪಿಂಡಗಳನ್ನು ತಾತ್ಕಾಲಿಕವಾಗಿ ಮೆದುಳು ಡೆಡ್ ಆದ ದಾನಿಗಳಿಗೆ ಕಸಿ ಮಾಡಲಾಗಿತ್ತು. ಆ ಇಬ್ಬರೂ ಪುರುಷರು ಹಂದಿಗಳಿಂದ ಹೃದಯ ಕಸಿ ಮಾಡಿಸಿಕೊಂಡ ತಿಂಗಳೊಳಗೆ ಸಾವನ್ನಪ್ಪಿದ್ದರು.
ಸ್ಲೇಮನ್ ಆಸ್ಪತ್ರೆಯಲ್ಲಿ 2018 ರಲ್ಲಿ ಮೂತ್ರಪಿಂಡ ಕಸಿ ಮಾಡಿಸಿಕೊಂಡಿದ್ದರು, ಆದರೆ ಕಳೆದ ವರ್ಷ ಅದು ವೈಫಲ್ಯದ ಲಕ್ಷಣಗಳನ್ನು ತೋರಿಸಿದಾಗ ಅವರು ಡಯಾಲಿಸಿಸ್ ಮಾಡಿಸಿಕೊಳ್ಳಬೇಕಾಗಿತ್ತು. ಆಗಾಗ್ಗೆ ಡಯಾಲಿಸಿಸ್ ಕಾರ್ಯವಿಧಾನದಲ್ಲಿ ತೊಡಕುಗಳು ಉಂಟಾದಾಗ ವೈದ್ಯರು ಹಂದಿ ಮೂತ್ರಪಿಂಡ ಕಸಿ ಮಾಡಿಸಿಕೊಳ್ಳಲು ಸೂಚಿಸಿದ್ದರು.