
ಕಾರವಾರ: ಪತ್ರಕರ್ತರು ಪ್ರಯಾಣಿಸುತ್ತಿದ್ದ ಕಾರ್ ಕೆಳಗೆ ನಾಡ ಬಾಂಬ್ ಸ್ಫೋಟಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆ ಜೊಯಿಡಾ ತಾಲೂಕಿನ ಗುಂದ ಗ್ರಾಮದ ಬಳಿ ನಡೆದಿದೆ.
ಪತ್ರಕರ್ತ ಸಂದೇಶ ದೇಸಾಯಿ ಅವರಿಗೆ ಸೇರಿದ ಕಾರ್ ನಲ್ಲಿ ಪತ್ರಕರ್ತರು ಶಾಸಕ ಆರ್.ವಿ. ದೇಶಪಾಂಡೆಯವರ ಸಭೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಕಾರ್ ನ ಟೈಯರ್ ಗೆ ಸಿಕ್ಕು ನಾಡ ಬಾಂಬ್ ಸ್ಫೋಟವಾಗಿದೆ. ಅದೃಷ್ಟವಶಾತ್ ಕಾರ್ ನಲ್ಲಿದ್ದ ಪತ್ರಕರ್ತರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
(ಸಾಂಧರ್ಭಿಕ ಚಿತ್ರ)