ಮೊಟ್ಟೆಯನ್ನ ಬಳಸಿ ತರಹೇವಾರಿ ಅಡುಗೆಗಳನ್ನ ತಯಾರು ಮಾಡಬಹುದು. ಇದು ಕೂಡ ಡಯಟರಿ ಫುಡ್ ಆಗಿರೋದ್ರಿಂದ ಸ್ಟಾರ್ ಸೆಲೆಬ್ರೆಟಿಗಳು ತಮ್ಮ ದಿನನಿತ್ಯದ ಆಹಾರದಲ್ಲಿ ಮೊಟ್ಟೆಯನ್ನ ಬಳಕೆ ಮಾಡೇ ಮಾಡ್ತಾರೆ, ಇದರಲ್ಲಿ ಬೇಯಿಸಿದ ಮೊಟ್ಟೆ ಹಾಗೂ ಆಮ್ಲೆಟ್ ಬಹಳ ಪ್ರಸಿದ್ಧ.
ಆದರೆ ಮೊಟ್ಟೆಯನ್ನ ಯಾವ ರೂಪದಲ್ಲಿ ಸೇವಿಸಿದ್ರೆ ಆರೋಗ್ಯಕ್ಕೆ ಒಳ್ಳೆಯದು ಎಂಬ ಗೊಂದಲ ನಿಮ್ಮಲ್ಲಿದ್ದರೆ ಇದಕ್ಕೆ ಉತ್ತರ ಇಲ್ಲಿದೆ ನೋಡಿ.
ಆಮ್ಲೆಟ್ ಮಾಡಬೇಕು ಅಂದರೆ ಅಡುಗೆ ಎಣ್ಣೆಯನ್ನ ಬಳಕೆ ಮಾಡಲೇಬೇಕಾಗುತ್ತೆ. ಇದು ನಿಮ್ಮ ಕ್ಯಾಲೋರಿ ಹೆಚ್ಚಳಕ್ಕೆ ಕಾರಣವಾಗಬಹುದು. ಇದರ ಜೊತೆಯಲ್ಲಿ ಉಪ್ಪು ಹಾಗೂ ಮಸಾಲಾ ಪದಾರ್ಥಗಳು ರುಚಿಯನ್ನ ಬದಲಾಯಿಸೋದ್ರ ಜೊತೆಗೆ ಪೌಷ್ಟಿಕಾಂಶದ ಮೌಲ್ಯವನ್ನ ಹೆಚ್ಚಿಸಲಿದೆ.
ಇನ್ನು ಬೇಯಿಸಿದ ಮೊಟ್ಟೆಗಳಲ್ಲಿ ಪ್ರೋಟಿನ್ ಹೇರಳವಾಗಿ ಇರಲಿದೆ. ಇದರಲ್ಲಿ ಯಾವುದೇ ಎಣ್ಣೆಯನ್ನ ಬಳಕೆ ಮಾಡದ ಕಾರಣ ಇದರಲ್ಲಿ ಕ್ಯಾಲೋರಿ ಮೌಲ್ಯ ಕಡಿಮೆ ಇರಲಿದೆ. ಹೀಗಾಗಿ ಮೊಟ್ಟೆಯ ಇತರೆ ಯಾವುದೇ ಖಾದ್ಯಗಳಿಗೆ ಹೋಲಿಸಿದ್ರೆ ಬೇಯಿಸಿದ ಮೊಟ್ಟೆ ಅತ್ಯಂತ ಆರೋಗ್ಯಕಾರಿ ಎನ್ನುತ್ತಾರೆ ಆಹಾರ ತಜ್ಞರು.