
ಬೆಂಗಳೂರು: ಬಿಎಂಟಿಸಿ ದಕ್ಷಿಣ ವಿಭಾಗದ ಬನಶಂಕರಿ ಡಿಪೋ 20ರ ಕಮರ್ಷಿಯಲ್ ವಿಭಾಗದಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಎಂಟಿಸಿ ಭದ್ರತಾ ಮತ್ತು ಜಾಗೃತ ದಳ ತನಿಖೆ ನಡೆಸಿದ್ದು, ತನಿಖೆಯಲ್ಲಿ 10 ನೌಕರರ ಅಕ್ರಮ ಬಯಲಾದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ.
ಇವರಲ್ಲಿ 9 ಮಂದಿ ಅನುಕಂಪದ ಆಧಾರದ ಮೇಲೆ ಕೆಲಸಕ್ಕೆ ಸೇರಿದ್ದಾರೆ. ಅವರು ಕೆಲಸ ನೀಡಲು ಕಂಡಕ್ಟರ್, ಡ್ರೈವರ್, ಮೆಕಾನಿಕ್ ಗಳಿಗೆ ಹಿಂಸೆ ನೀಡಿ ಅವರಿಂದ ಪ್ರತಿವಾರ 500 ರೂ., 1000 ರೂ. ಕಲೆಕ್ಷನ್ ಮಾಡುತ್ತಿದ್ದರು. ಹೀಗೆ ಸಂಗ್ರಹಿಸಿದ ಹಣವನ್ನು ಬಿಟ್ ಕಾಯಿನ್ ದಂಧೆಯಲ್ಲಿ ಹೂಡಿಕೆ ಮಾಡಿದ್ದರು ಎನ್ನಲಾಗಿದೆ.
ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹೇಶ್, ಪವನ್ ಕುಮಾರ್, ರಘುವರನ್, ಸತೀಶ್ ಪತ್ತಾರ, ಸಂತೋಷ್ ಕುಮಾರ್, ಮದನ್, ಅರುಣ್ ಕುಮಾರ್, ವೀರೇಶ್, ಮಂಜುನಾಥ್, ರಾಕೇಶ್ ಅವರನ್ನು ಅಮಾನತು ಮಾಡಲಾಗಿದೆ ಎನ್ನಲಾಗಿದೆ.