ಸಾಮಾಜಿಕ ಜಾಲತಾಣದಲ್ಲಿ ಭಯಾನಕ ವಿಡಿಯೋ ಒಂದು ವೈರಲ್ ಆಗಿದೆ. ಅಂಧವಿಶ್ವಾಸ, ಮೂಡನಂಬಿಕೆಗೆ ಈ ಘಟನೆ ಸಾಕ್ಷವಾಗಿದೆ. ಕುದಿಯುತ್ತಿರುವ ಹಾಲಿನಲ್ಲಿ ಮಗುವನ್ನು ನಿಲ್ಲಿಸುವ ಪೂಜಾರಿ ನಂತ್ರ ತನ್ನ ಮೇಲೆ ಹಾಗೂ ಮಗುವಿನ ಮೇಲೆ ಹಾಲನ್ನು ಎರೆಚಿಕೊಳ್ಳುವ ದೃಶ್ಯವನ್ನು ನೀವು ವಿಡಿಯೋದಲ್ಲಿ ನೋಡಬಹುದು.
ಸುಮಿತ್ ಚೌಹಾಣ್ ತಮ್ಮ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ತುಂಬಾ ಭಯಾನಕವಾಗಿದೆ. ಅಂತಹ ಮೂಢನಂಬಿಕೆ ಮತ್ತು ಬೂಟಾಟಿಕೆಗಳನ್ನು ತಪ್ಪಿಸಿ. ಇದು ನಿಮ್ಮ ಮಗುವಿಗೆ ಮಾರಕವಾಗಬಹುದು. ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಆಯೋಗ ಇಂತಹ ಪ್ರಕರಣಗಳ ಬಗ್ಗೆ ಎಚ್ಚೆತ್ತುಕೊಂಡು ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಕಡಿವಾಣ ಹಾಕಬೇಕು. ಆರೋಪಿಯನ್ನು ಬಂಧಿಸಿ ಜೈಲಿಗೆ ಹಾಕಬೇಕು ಎಂದು ಶೀರ್ಷಿಕೆ ಹಾಕಿದ್ದಾರೆ.
ಈ ವಿಡಿಯೋ ನೋಡಿದ ಅನೇಕರು ಇದಕ್ಕೆ ಕಮೆಂಟ್ ಮಾಡಿದ್ದಾರೆ. ಯಾದವ ಜನಾಂಗಕ್ಕೆ ಸೇರಿದ ಸಂಪ್ರದಾಯ ಇದು. ಪ್ರತಿ ವರ್ಷ ಈ ಆಚರಣೆ ನಡೆಯುತ್ತದೆ. ಇದಕ್ಕೆ ಮಹತ್ವವಿದೆ ಎಂದು ಒಬ್ಬರು ಕಮೆಂಟ್ ಮಾಡುವ ಮೂಲಕ ಇದು ಯಾದವ ಸಮಾಜದ ಪದ್ಧತಿ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಅನೇಕರು ಇದ್ರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
https://twitter.com/Sumitchauhaan/status/1817821500595958088?ref_src=twsrc%5Etfw%7Ctwcamp%5Etweetembed%7Ctwterm%5E1817821500595958088%7Ctwgr%5E9dd8da7a3d5516af8ac56cee8555890039039f65%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Ftopindiannews-epaper-dh90d0f8f90ef3441695ffc4a0a4a51e7c%2Fblindfaithpriestdipsthenpourschildinboilingmilkwatch-newsid-n624194463