BIG NEWS: 9 ವರ್ಷಗಳಿಂದ ನೆಹರು ಕುಟುಂಬದ ಮೇಲೆ ಬಿಜೆಪಿ ಗದಾಪ್ರಹಾರ; ಕುತಂತ್ರದಿಂದಾಗಿ ರಾಹುಲ್ ಗಾಂಧಿ ವಜಾ; ಡಿಸಿಎಂ ಆಕ್ರೋಶ

ಬೆಂಗಳೂರು: ಬಿಜೆಪಿ ಕುತಂತ್ರದಿಂದಾಗಿ ರಾಹುಲ್ ಗಾಂಧಿಯವರನ್ನು ಸಂಸದ ಸ್ಥಾನದಿಂದ ವಜಾ ಮಾಡಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕಾಂಗ್ರೆಸ್ ನಾಯಕರ ಮೌನ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಡಿ.ಕೆ.ಶಿವಕುಮಾರ್, 9 ವರ್ಷಗಳಿಂದ ನೆಹರು ಕುಟುಂಬದ ಮೇಲೆ ಬಿಜೆಪಿ ಗದಾಪ್ರಹಾರ ಮಾಡುತ್ತಿದೆ ಎಂದು ಆರೊಪಿಸಿದರು.

ಭಾರತ್ ಜೋಡೋ ಯಾತ್ರೆಯಿಂದಾಗಿ ನಮಗೆ ಶಕ್ತಿ ಬಂದಿದೆ. ಬಿಜೆಪಿಗೆ ತನ್ನ ಸ್ಥಾನ ಉಳಿಸಿಕೊಳ್ಳುವುದು ಕಷ್ಟವಾಗಿದೆ. 7 ಲಕ್ಷ ಮತಗಳಿಂದ ಗೆದ್ದ ರಾಹುಲ್ ಗಾಂಧಿಯವರನ್ನು ಬಿಜೆಪಿ ಕುತಂತ್ರದಿಂದ ವಜಾ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read