ಬಿಜೆಪಿ 219, ಕಾಂಗ್ರೆಸ್ 218, ಜೆಡಿಎಸ್ 207 ಸೇರಿ 3044 ಅಭ್ಯರ್ಥಿಗಳ ನಾಮಪತ್ರ ಸ್ವೀಕೃತ: 5 ಕ್ಷೇತ್ರಗಳ ಪರಿಶೀಲನೆ ಬಾಕಿ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ನಾಮಪತ್ರ ಪರಿಶೀಲನೆ ಕಾರ್ಯ ಪೂರ್ಣಗೊಂಡಿದ್ದು, ಕಣದಲ್ಲಿ 3044 ಅಭ್ಯರ್ಥಿಗಳ ಉಮೇದುಗಾರಿಕೆ ಸ್ವೀಕೃತಗೊಂಡಿದೆ.

ಸವದತ್ತಿ, ಹಾವೇರಿ, ರಾಯಚೂರು, ಶಿವಾಜಿನಗರ, ಔರಾದ್ ವಿಧಾನಸಭಾ ಕ್ಷೇತ್ರಗಳ ನಾಮಪತ್ರ ಪರಿಶೀಲನೆ ಕಾರ್ಯ ಬಾಕಿ ಇದೆ. ಉಳಿದ ಕ್ಷೇತ್ರಗಳಲ್ಲಿ 3044 ಅಭ್ಯರ್ಥಿಗಳ ಒಟ್ಟು 4,989 ನಾಮಪತ್ರಗಳು ಸ್ವೀಕೃತಗೊಂಡಿವೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಬಿಜೆಪಿ 219, ಕಾಂಗ್ರೆಸ್ 218, ಜೆಡಿಎಸ್ 207, ಆಮ್ ಆದ್ಮಿ ಪಕ್ಷದ 207, ಬಿ.ಎಸ್.ಪಿ. 135, ಸಿಪಿಐಎಂ 4 ಅಭ್ಯರ್ಥಿಗಳ ನಾಮಪತ್ರ ಸಿಂಧುವಾಗಿದೆ. ನೋಂದಾಗಿತ ಅಲ್ಲದ ಪಕ್ಷಗಳ ಒಟ್ಟು 720, 1334 ಪಕ್ಷೇತರ ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ವಿವಿಧ ಕಾರಣಗಳಿಂದ 508 ನಾಮಪತ್ರಗಳು ತಿರಸ್ಕೃತಗೊಂಡಿದೆ. ಏಪ್ರಿಲ್ 24 ಸೋಮವಾರ ನಾಮಪತ್ರ ಹಿಂಪಡೆದುಕೊಳ್ಳಲು ಕೊನೆಯ ದಿನವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read