ಬೆಂಗಳೂರು :ಇಂದಿನ ದಿನಗಳಲ್ಲಿ ಹೆಚ್ಚಾಗಿ ಜನರು ಆನ್ ಲೈನ್ ನಲ್ಲೇ ಹಣ ವರ್ಗಾವಣೆ ಮಾಡುತ್ತಾರೆ. ಆನ್ ಲೈನ್ ಟ್ರಾನ್ಸಾಕ್ಷನ್ ಬಂದ ಬಳಿಕ ವಂಚಕರು ಗೊತ್ತೇ ಆಗದಂತೆ ಖಾತೆಯಲ್ಲಿದ್ದ ಹಣ ಎಗರಿಸುತ್ತಾರೆ. ಬ್ಯಾಂಕ್ ನಿಂದ ಕರೆ ಮಾಡುತ್ತಿದ್ದೇವೆ ಎಂದು ಒಟಿಪಿ, ಪಾಸ್ವರ್ಡ್ ಕೇಳಿ ಅದನ್ನು ಬಳಸಿಕೊಂಡು ವಂಚಕರು ಖಾತೆಯಿಂದ ಹಣ ಎಗರಿಸಿದ ಹಲವಾರು ಪ್ರಕರಣ ನಡೆದಿದೆ. ಈಗ ಫಿಂಗರ್ ಪ್ರಿಂಟ್ ಮೂಲಕವೂ ವಂಚಕರು ಹಣ ದೋಚುತ್ತಾರೆ.
ಹೌದು, ನೀವು ನೀಡುವ ಬಯೋಮೆಟ್ರಿಕ್ ಫಿಂಗರ್ ಪ್ರಿಂಟ್ ನಿಂದ ವಂಚಕರು ನಿಮಗೆ ಮೋಸ ಮಾಡಿ ನಿಮ್ಮ ಖಾತೆಯಿಂದ ಹಣವನ್ನು ದೋಚಬಹುದು ಹೀಗಾಗಿ ಬಯೋಮೆಟ್ರಿಕ್ ಅನ್ನು ಲಾಕ್ ಮಾಡುವುದು ಉತ್ತಮ.
ಬಯೋಮೆಟ್ರಿಕ್ ಲಾಕ್ ಮಾಡುವ ಕುರಿತಂತೆ ಶುಭಾ ಅಡಿಗ ಎನ್ನುವವರು ಯೂಟ್ಯೂಬ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಆಧಾರ್ ವೆಬ್ ಸೈಟ್ ಹೋಗಿ ನಮ್ಮ ಫಿಂಗರ್ ಪ್ರಿಂಟ್ ಅಥವಾ ಬಯೋಮೆಟ್ರಿಕ್ ಅನ್ನು ಲಾಕ್ ಮಾಡಬಹುದು. ಲಾಕ್ ಮಾಡುವುದರಿಂದ ಬೇರೆಯವರು ನಮ್ಮ ಫಿಂಗರ್ ಪ್ರಿಂಟ್ ನ್ನು ಬಳಸಿ ವಂಚನೆ ಮಾಡುವುದನ್ನು ತಪ್ಪಿಸಬಹುದು.
ಬಯೋಮೆಟ್ರಿಕ್ ಲಾಕ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ
ಗೂಗಲ್ ಗೆ ಹೋಗಿ Aadhar ಟೈಪ್ ಮಾಡಿ ಕ್ಲಿಕ್ ಮಾಡಿದ್ರೆ `UIDIA ಓಪನ್ ಮಾಡಿ.
ಬಳಿಕ ಬಲಗಡೆ ಕ್ಲಿಕ್ ಮಾಡಿದ್ರೆ ಮೈಆಧಾರ್ ಅಡಿಯಲ್ಲಿ ಬರುವ ಆಧಾರ್ ಸರ್ವಿಸಸ್ ಕ್ಲಿಕ್ ಮಾಡಬೇಕು,
ನಂತರ ಸ್ಕ್ರೋಲ್ ಮಾಡಿದ್ರೆ ಕೆಳಗಡೆ `Secure Your Biometrics ಕ್ಲಿಕ್ ಮಾಡಬೇಕು.
ನಂತರ `Well come My Aadhaar ಅಂತ ಬರುತ್ತೆ. ಕೆಳಗೆ ಲಾಗಿನ್ ಆಗಬೇಕು. (ಆಧಾರ್ ಕಾರ್ಡ್ ನಂಬರ್, ಲಿಂಕ್ ಆಗಿರುವ ಮೊಬೈಲ್ ನಂಬರ್). ನಂತರ ಸೆಂಡ್ ಒಟಿಪಿ ಕ್ಲಿಕ್ ಮಾಡಬೇಕು. ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿಯನ್ನು ನಮೂದಿಸಬೇಕು.
ನಂತರ ಬಯೋಮೆಟ್ರಿಕ್ ಲಾಕ್ ಅಂತ ಆಯ್ಕೆ ಕಾಣಿಸುತ್ತದೆ. ಲಾಕ್ ಬಯೋಮೆಟ್ರಿಕ್ ಕ್ಲಿಕ್ ಮಾಡಿದ್ರೆ ನಮ್ಮ ಬಯೋಮೆಟ್ರಿಕ್ ಸೇಫ್ ಆಗುತ್ತದೆ.