
ಶಿವಮೊಗ್ಗ: ಸೆಪ್ಟೆಂಬರ್ 18 ರಿಂದ ಗಣೇಶ ಹಬ್ಬ ಮತ್ತು ಸೆಪ್ಟೆಂಬರ್ 28 ರಿಂದ ಸೆಪ್ಟೆಂಬರ್ 30 ರವರೆಗೆ ಈದ್ ಮಿಲಾದ್ ಹಬ್ಬಗಳ ಆಚರಣೆಗಳಿದ್ದು, ಜಿಲ್ಲೆಯು ಸೂಕ್ಷ್ಮತೆಯಿಂದ ಕೂಡಿರುವ ಪ್ರದೇಶವಾಗಿರುವುದರಿಂದ ಜಿಲ್ಲಾ ಪೊಲೀಸ್ ಅಧೀಕ್ಷಕರ ಶಿಫಾರಸ್ಸಿನ ಮೇರೆಗೆ ಜಿಲ್ಲೆಯಾದ್ಯಂತ ಕಾನೂನು ಸುವ್ಯವಸ್ಥೆ, ಸೌಹಾರ್ದತೆ ಮತ್ತು ಶಾಂತಿ ಕಾಪಾಡುವ ನಿಟ್ಟಿನಲ್ಲಿ ದಿ: 17-09-2023 ರಿಂದ 01-10-2023 ರವರೆಗೆ ಜಿಲ್ಲೆಯಾದ್ಯಂತ ಬೈಕ್ ರ್ಯಾಲಿ ನಡೆಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಆರ್ ಆದೇಶಿಸಿರುತ್ತಾರೆ.