ಗಣರಾಜ್ಯೋತ್ಸವ ದಿನದಂದು ರಾಷ್ಟ್ರಧ್ವಜ ಹಾರಿಸಲು ಮುಂದಾದ ವ್ಯಕ್ತಿಯೊಬ್ಬರಿಗೆ ಹೈ ವೋಲ್ಟೇಜ್ ಕರೆಂಟ್ ತಗುಲಿದ ಪರಿಣಾಮ ತೀವ್ರ ಸುಟ್ಟ ಗಾಯಗಳಿಂದ ಮೃತಪಟ್ಟಿರುವ ಘಟನೆ ಬಿಹಾರದಲ್ಲಿ ನಡೆದಿದೆ.
ಸೀತಾಮಾರಿ ಜಿಲ್ಲೆ ರಾಮ್ ನಗರದಲ್ಲಿ ಖಾಸಗಿ ಕೋಚಿಂಗ್ ಸೆಂಟರ್ ನಡೆಸುವ ಅಭಿಷೇಕ್ ಜಾ ಮೃತಪಟ್ಟ ವ್ಯಕ್ತಿಯಾಗಿದ್ದು, ಪ್ರತಿವರ್ಷದಂತೆ ಈ ವರ್ಷವೂ ಅವರು ಗಣರಾಜ್ಯೋತ್ಸವ ದಿನದಂದು ರಾಷ್ಟ್ರಧ್ವಜಾರೋಹಣ ಮಾಡಲು ಮುಂದಾಗಿದ್ದರು.
ಈ ವೇಳೆ ರಾಷ್ಟ್ರಧ್ವಜ ಕಟ್ಟಿದ್ದ ಕಬ್ಬಿಣದ ಪೈಪ್‍ಗೆ 11 ಸಾವಿರ ವೋಲ್ಟ್ ವಿದ್ಯುತ್ ಪ್ರವಹಿಸುತ್ತಿದ್ದ ವಯರ್ ಸಂಪರ್ಕಕ್ಕೆ ಬಂದಿದ್ದು ಇದರಿಂದ ಅವರಿಗೆ ತೀವ್ರ ಸುಟ್ಟ ಗಾಯಗಳಾಗಿತ್ತು. ಇವರನ್ನು ರಕ್ಷಿಸಲು ಹೋದ ನಾಲ್ವರು ಸಹ ಕರೆಂಟ್ ಶಾಕ್ ಗೆ ಒಳಗಾಗಿದ್ದು, ಅವರುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.