ಬೆಂಗಳೂರು : ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ವಾಹನ ಸವಾರರಿಗೆ ಇ-ಚಲನ್ ನಲ್ಲಿ ದಂಡ ವಿಧಿಸುವಲ್ಲಿ ದೇಶದಲ್ಲೇ ಕರ್ನಾಟಕ ಮೊದಲ ಸ್ಥಾನದಲ್ಲಿದೆ.
ರಾಜ್ಯ ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಇ-ಚಲನ್ ಬಳಸಿ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ದಂಡ ಸಂಗ್ರಹ ಇಡೀ ದೇಶದಲ್ಲಿ ಕರ್ನಾಟಕ ಬಹಳ ಮುಂದಿದೆ. ಕರ್ನಾಟಕದಿಂದಲೇ ಶೇ.50ಕ್ಕೂ ಹೆಚ್ಚು ಇ-ಚಲನ್ ಪ್ರಕರಣಗಳು ದಾಖಲಾಗಿವೆ. ಹಸ್ತಚಾಲಿತ ಸ್ವೀಕೃತಿ ವ್ಯವಸ್ಥೆಯನ್ನು ತ್ಯಜಿಸಿ ಶೀಘ್ರದಲ್ಲೇ ಇಡೀ ರಾಜ್ಯವನ್ನು ಇ-ಚಲನ್ ವ್ಯಾಪ್ತಿಗೆ ತರಲಾಗುವುದು ಎಂದು ಹೇಳಿದ್ದಾರೆ.
ಕಳೆದ 9 ದಿನಗಳ ಅಂಕಿ ಅಂಶಗಳ ಪೈಕಿ ದೇಶದಲ್ಲಿ ಇ-ಚಲನ್ ಮುಖಾಂತರ ಒಟ್ಟು 42,071 ಸಂಚಾರ ಉಲ್ಲಂಘನೆ ಪ್ರಕರಣ ದಾಖಲಾಗಿವೆ. ಇದರಿಂದ ಒಟ್ಟು 2.10 ಕೋಟಿ ರೂ. ದಂಡ ವಿಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.