
ಬೆಂಗಳೂರು : ರಾಜ್ಯದ ಹಿಂದುಳಿದ ವರ್ಗಗಳ ಶಾಶ್ವತ ಆಯೋಗಕ್ಕೆ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡಿ ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧಿನಿಯಮ 1995ರ ಪರಿಚ್ಛೇದ 3 ಮತ್ತು 4(1) ಅಡಿಯಲ್ಲಿ ಪ್ರದತ್ತವಾದ ಅಧಿಕಾರದನ್ವಯ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಈ ಕೆಳಕಂಡವರನ್ನು ದಿನಾಂಕ:25.11.2023 ರಿಂದ ದಿನಾಂಕ:31.01.2024 ರವರೆಗೆ ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ನೇಮಕ ಮಾಡಿ ಆದೇಶಿಸಿದೆ.
ಕೆ. ಜಯಪ್ರಕಾಶ್ ಹೆಗ್ಡೆ ಮಾಜಿ ಸಚಿವರು, ಕರ್ನಾಟಕ ಸರ್ಕಾರ, ಕೊರ್ಗಿ ಹೌಸ್, ಕೊರ್ಗಿ ಪೋಸ್ಟ್, ಕುಂದಾಪುರ ತಾಲ್ಲೂಕು, ಉಡುಪಿ ಜಿಲ್ಲೆ. ಅಧ್ಯಕ್ಷರು
ಶ್ರೀ ಕಲ್ಯಾಣಕುಮಾರ್ ಹೆಚ್.ಎಸ್. ಬಿನ್ ಲೇಟ್ ಶಿವಪ್ಪ ಹೆಚ್, ಓಟೂರು ಗ್ರಾಮ, ಸೊರಬ ತಾಲ್ಲೂಕು, ಶಿವಮೊಗ್ಗ ಜಿಲ್ಲೆ. ಸದಸ್ಯರು
ಶ್ರೀ ರಾಜಶೇಖರ್ ಬಿ.ಎಸ್. ವಕೀಲರು, ನಂ.49, 1ನೇ ಕ್ರಾಸ್, ಬ್ಯಾಟರಾಯನಪುರ, ಏರಪೋರ್ಟ್ ರಸ್ತೆ, ಬೆಂಗಳೂರು-92. ಸದಸ್ಯರು
ಅರುಣ್ ಕುಮಾರ್ ಬಿನ್ ಬಸವ ಮರೋಕಲ್, ಸಪ್ತಗಿರಿ ನಿಲಯ, ಕಾವಡಿಹಳ್ಳಿ, ಉಡುಪಿ. ಸದಸ್ಯರು
ಕೆ.ಟಿ ಸುವರ್ಣ ಬಿನ್ ಡಿ. ಕೆ. ಶಿವಪ್ಪ ಪೂಜಾರಿ, ನಂ.22-18/1, ಅನ್ನಪೂರ್ಣೇಶ್ವರಿ ಕೃಪ, ಗಣೇಶನಗರ, ಉಳ್ಳಾಲ ಅಂಚೆ, ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ, ಸದಸ್ಯರು
ಶಾರದಾ ನಾಯ್ಕ ನಂ.655, ಉನ್ನತಿ, ಚರ್ಚ್ ಎದುರು, ಸಿಬಿಐ ಮುಖ್ಯರಸ್ತೆ, 2ನೇ ಕ್ರಾಸ್, ಹೆಚ್‌ಎಂಟಿ ಲೇಔಟ್, ಆರ್.ಟಿ ನಗರ, ಬೆಂಗಳೂರು. ಸದಸ್ಯರು
