ನವದೆಹಲಿ: ಈ ವರ್ಷ ಸೆಪ್ಟೆಂಬರ್ 30 ರ ನಂತರ 2000 ರೂಪಾಯಿ ನೋಟುಗಳ ವಿನಿಮಯದ ಗಡುವಿನ ವಿಸ್ತರಣೆಯು ಪ್ರಸ್ತುತ ಪರಿಗಣನೆಯಲ್ಲಿಲ್ಲ ಎಂದು ಸರ್ಕಾರ ಹೇಳಿದೆ.
ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ, ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಪ್ರಕಾರ ಚಲಾವಣೆಯಲ್ಲಿರುವ 2000 ರೂಪಾಯಿ ಮುಖಬೆಲೆಯ ನೋಟುಗಳ ಮೌಲ್ಯ 84 ಸಾವಿರ ಕೋಟಿ ರೂಪಾಯಿಗಳು. ಕಳೆದ ತಿಂಗಳ 3 ರವರೆಗೆ ಚಲಾವಣೆಯಲ್ಲಿರುವ ಒಟ್ಟು ನೋಟುಗಳಲ್ಲಿ 2000 ರೂಪಾಯಿ ಮುಖಬೆಲೆಯ ಶೇಕಡಾವಾರು 2.51 ರಷ್ಟಿದೆ ಎಂದು ಮಾಹಿತಿ ನೀಡಿದ್ದಾರೆ.
2000 ರೂ. ನೋಟು ಬದಲಾವಣೆಗೆ ಆರ್ ಬಿಐ ನಾಲ್ಕು ತಿಂಗಳ ಕಾಲಾವಕಾಶವನ್ನು ನೀಡಿದೆ. ಹೀಗಾಗಿ ಕೊನೆಯ ದಿನವನ್ನು ವಿಸ್ತರಣೆ ಮಾಡುವ ವಿಚಾರ ಪರಿಶೀಲನೆಯಲ್ಲಿ ಇಲ್ಲ ಎಂದು ಹಣಕಾಸು ಖಾತೆ ಸಚಿವ ಪಂಕಜ್ ಚೌಧರಿ ಲಿಖಿತ ಉತ್ತರ ದಲ್ಲಿ ತಿಳಿಸಿದ್ದಾರೆ.