ನವದೆಹಲಿ : ಹಣಕಾಸು ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಬೆಂಗಳೂರಿನ ನ್ಯಾಷನಲ್ ಕೊ ಆಪರೇಟಿವ್ ಬ್ಯಾಂಕ್ ಗೆ ನಿರ್ಬಂಧ ಹೇರಿದೆ.
ಬೆಂಗಳೂರಿನ ನ್ಯಾಷನಲ್ ಕೊ ಆಪರೇಟಿವ್ ಬ್ಯಾಂಕ್ ದಿವಾಳಿಯಾಗುವ ಆತಂಕ ಎದುರಾಗಿದ್ದು, ಬ್ಯಾಂಕ್ ವ್ಯವಹಾರಗಳ ಮೇಲೆ ನಿರ್ಬಂಧ ಹೇರಿ ಭಾರತೀಯ ರೀಸರ್ವ್ ಬ್ಯಾಂಕ್ ಆದೇಶಿಸಿದೆ. ದ ನ್ಯಾಷನಲ್ ಕೋ ಅಪರೇಟಿವ್ ಬ್ಯಾಂಕ್ ಬೆಂಗಳೂರಿನಲ್ಲಿ 12, ಮೈಸೂರಿನಲ್ಲಿ 1 ಶಾಖೆಯನ್ನು ಹೊಂದಿದೆ.
1975 ರಲ್ಲಿ ಆರಂಭವಾಗಿರುವ ನ್ಯಾಷನಲ್ ಕೋ ಅಪರೇಟಿವ್ ಬ್ಯಾಂಕ್ ಬೆಂಗಳೂರು ಮತ್ತು ಮೈಸೂರಿನಲ್ಲಿ 13 ಶಾಖೆಗಳನ್ನು ಹೊಂದಿದೆ. ಈ ಬ್ಯಾಂಕ್ 1.04 ಲಕ್ಷ ಠೇವಣಿದಾರರನ್ನು ಹೊಂದಿದ್ದು, 1 ಸಾವಿರ ಕೋಟಿ ರೂ. ವಹಿವಾಟು ನಡೆಸುತ್ತಿದೆ.ಆದರೆ ಬ್ಯಾಂಕ್ ನಿಂದ 869 ಕೋಟಿಗೂ ಹೆಚ್ಚಿನ ಸಾಲ ನೀಡಲಾಗಿದ್ದು, ಅದರಲ್ಲಿ 500 ಕೋಟಿ ರೂ. ಸಾಲ ವಸೂಲಿ ಮಾಡಲಾಗಿದೆ. ಕಳೆದೊಂದು ವರ್ಷದಿಂದ ಬ್ಯಾಂಕ್ ನ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಹೀಗಾಗಿ ಬ್ಯಾಂಕಿನ ಮೇಲೆ ಕೆಲವೊಂದು ನಿರ್ಬಂಧ ಹೇರಿದ್ದು, ಹೊಸದಾಗಿ ಯಾವುದೇ ಸಾಲ ನೀಡಬಾರದು ಎಂದು ಕಟ್ಟುನಿಟ್ಟಾಗಿ ಸೂಚಿಸಿದೆ.