ಬೆಂಗಳೂರು : ರಾಜ್ಯ ಸರ್ಕಾರ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಿದ್ದು, ಮತ್ತೆ 21 ಮಂದಿ ಡಿವೈಎಸ್ಪಿ ಹಾಗೂ 66 ಮಂದಿ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆಗೊಳಿಸಿ ಮಂಗಳವಾರ ರಾಜ್ಯ ಸರ್ಕಾರ ಆದೇಶಿಸಿದೆ.
ಡಿವೈಎಸ್ ಪಿ ಎಲ್.ನವೀನ್ ಕುಮಾರ್(ದೇವನಹಳ್ಳಿ ಉಪ ವಿಭಾಗ), ಪ್ರಕಾಶ್ ರಾಥೋಡ್ (ಕೆ.ಜಿ.ಹಳ್ಳಿ ಉಪ ವಿಭಾಗ), ಎ.ವಿ.ಲಕ್ಷ್ಮೀ ನಾರಾಯಣ (ಆಡುಗೋಡಿ ಸಂಚಾರ), ಬಿ.ಶಿವಶಂಕರ ರೆಡ್ಡಿ (ಮೈಕೋ ಲೇಔಟ್ ಉಪ ವಿಭಾಗ)ಕ್ಕೆ ವರ್ಗಾವಣೆ ಮಾಡಲಾಗಿದೆ.
ಐಎಸ್‌ಡಿಯಲ್ಲಿದ್ದ ಸಂದೇಶ್ ಪಿಜಿಗೆ ಮೂಡುಬಿದಿರೆ ಠಾಣೆಗೆ, ಡಿಸಿಆರ್‌ಇ ಯಲ್ಲಿದ್ದ ಅಜ್ಮತ್ ಅಲಿಗೆ ಬಜ್ಪೆ ಠಾಣೆಗೆ, ಸಿಟಿ ಎಸ್‌ಬಿಯಲ್ಲಿದ್ದ ಮುಹಮ್ಮದ್ ಶರೀಫ್‌ಗೆ ಮಂಗಳೂರು ಸಂಚಾರ ಉತ್ತರ, ಪಣಂಬೂರಿನ ಸೋಮಶೇಖರ್ ಗೆ ಕದ್ರಿ ಠಾಣೆಗೆ, ಕದ್ರಿಯ ಅನಂತ ಪದ್ಮನಾಭರಿಗೆ ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆಗೊಳಿಸಲಾಗಿದೆ.
`DYSP’ ವರ್ಗಾವಣೆ ಪಟ್ಟಿ
ಇನ್ಸ್ ಪೆಕ್ಟರ್ ಗಳ ವರ್ಗಾವಣೆ ಪಟ್ಟಿ