ನವದೆಹಲಿ: CBSE 1 ರಿಂದ XII ವರೆಗಿನ ಎಲ್ಲಾ ತರಗತಿಗಳಲ್ಲಿ ಆರೋಗ್ಯ ಮತ್ತು ದೈಹಿಕ ಶಿಕ್ಷಣವನ್ನು ಕಡ್ಡಾಯಗೊಳಿಸುತ್ತದೆ. ಆರೋಗ್ಯ ಮತ್ತು ದೈಹಿಕ ಶಿಕ್ಷಣದ ಅವಿಭಾಜ್ಯ ಅಂಗವಾಗಿ ಯೋಗವನ್ನು ಶಿಫಾರಸು ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವೆ ಅನ್ನಪೂರ್ಣ ದೇವಿ ಅವರು, CBSE 1 ರಿಂದ XII ವರೆಗಿನ ಎಲ್ಲಾ ತರಗತಿಗಳಲ್ಲಿ ಆರೋಗ್ಯ ಮತ್ತು ದೈಹಿಕ ಶಿಕ್ಷಣವನ್ನು ಕಡ್ಡಾಯಗೊಳಿಸಿದೆ ಎಂದು ಹೇಳಿದರು.
ಶಾಲೆಗಳಿಗೆ ಪ್ರತಿದಿನ ಒಂದು ಅವಧಿಯ ಆರೋಗ್ಯ ಮತ್ತು ದೈಹಿಕ ಶಿಕ್ಷಣವನ್ನು ಇರಿಸಲು ಮಂಡಳಿಯು ನಿರ್ದೇಶಿಸಿದೆ. ವಿದೇಶದಿಂದ ಯೋಗಾಸಕ್ತರನ್ನು ಭಾರತದಲ್ಲಿ ಅಧಿಕೃತ ಯೋಗ ತರಬೇತಿ ಪಡೆಯಲು ಉತ್ತೇಜಿಸಲು ಸರ್ಕಾರವು ಸ್ಟಡಿ ಇನ್ ಇಂಡಿಯಾ ಕಾರ್ಯಕ್ರಮದಲ್ಲಿ ಯೋಗ ತರಬೇತಿಯನ್ನು ಸೇರಿಸಿದೆ ಎಂದು ಸಚಿವರು ಪ್ರಸ್ತಾಪಿಸಿದರು.