ಬೆಂಗಳೂರು : ರಾಜ್ಯದ 1ರಿಂದ 9 ತರಗತಿಯ ವಿದ್ಯಾರ್ಥಿಗಳು ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಪರೀಕ್ಷೆ ಯಿಂದ ವಿನಾಯಿತಿ ನೀಡುವ ಬಗ್ಗೆ ಶಾಲಾ ಶಿಕ್ಷಣ ಇಲಾಖೆ ಮಹತ್ವದ ಸೂಚನೆ ನೀಡಿದೆ.
ವಿಷಯಾನ್ವಯವಾಗಿ, ಸರ್ಕಾರದ ಆದೇಶ ಸಂಖ್ಯೆ: ಇಪಿ 62 ಎಸ್.ಎಲ್.ಬಿ 2021, ದಿನಾಂಕ : 15-03-2021 ರಲ್ಲಿ ವಿಶೇಷ ಅಗತ್ಯವುಳ್ಳ ವಿದ್ಯಾರ್ಥಿಗಳಿಗೆ 10ನೇ ತರಗತಿ ಪರೀಕ್ಷಾ ಮಂಡಳಿಯ ಪರೀಕ್ಷೆಯಲ್ಲಿ ಹಾಗೂ ಸರ್ಕಾರದ ಆದೇಶ ಸಂಖ್ಯೆ: ಇಡಿ 15 ಟಿಪಿಯು 2018 ದಿನಾಂಕ : 28-02-2018ರಲ್ಲಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಹಲವಾರು ವಿನಾಯಿತಿಗಳನ್ನು ನೀಡಿರುವಂತೆ, ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ, ಬೆಂಗಳೂರುರವರ ಪತ್ರ : 23-02-2023 ಅನ್ನು ಪರಿಗಣಿಸಿ, ಸರ್ಕಾರವು ಸದರಿ ಸೌಲಭ್ಯಗಳನ್ನು 1 ರಿಂದ 9ನೇ ತರಗತಿಗಳಲ್ಲಿ ರಾಜ್ಯಪಠ್ಯಕ್ರಮದಲ್ಲಿ ವ್ಯಾಸಂಗ ಮಾಡುತ್ತಿರುವ ವಿಶೇಷ ಅಗತ್ಯವುಳ್ಳ ವಿದ್ಯಾರ್ಥಿಗಳಿಗೆ ಅನ್ವಯಿಸುವಂತೆ ಪರೀಕ್ಷಾ ವಿನಾಯಿತಿ ನೀಡಿ ಉಲ್ಲೇಖ ಸರ್ಕಾರದ ಪತ್ರದಲ್ಲಿ ಅದೇಶಿಸಲಾಗಿದೆ.
ಈ ಹಿನ್ನೆಲೆಯಲ್ಲಿ, ತಮ್ಮ ಕಾರ್ಯಾಡಳಿತ ವ್ಯಾಪ್ತಿಯಲ್ಲಿ ಬರುವ ಶಾಲೆಗಳಲ್ಲಿ ಉಲ್ಲೇಖ ಸರ್ಕಾರದ ಪತ್ರದಲ್ಲಿ ನಿರ್ದೇಶಿಸಿರುವಂತೆ, 1 ರಿಂದ 9 ನೇ ತರಗತಿಯವರೆಗೆ ರಾಜ್ಯ ಪಠ್ಯಕ್ರಮದಲ್ಲಿ ವ್ಯಾಸಂಗ ಮಾಡುತ್ತಿರುವ ವಿಶೇಷ ಅಗತ್ಯವುಳ್ಳ ವಿದ್ಯಾರ್ಥಿಗಳಿಗೆ ಅನುಬಂಧ-1 ಮತ್ತು ಅನುಬಂಧ-2ರಲ್ಲಿರುವಂತೆ ರಾಜ್ಯ ಪಠ್ಯಕ್ರಮದಿಂದ ನೀಡಬೇಕಾದ ಪರೀಕ್ಷಾ ವಿನಾಯಿತಿ ನೀಡಲು ಕ್ರಮವಹಿಸಲು ತಿಳಿಸಿದೆ. (ಸರ್ಕಾರದ ಆದೇಶದ ಪ್ರತಿ ಅನುಬಂಧಿಸಿದೆ)
ವಿ.ಸೂ. ಈ ವಿನಾಯಿತಿ ನೀಡಲು ನ್ಯೂನತೆಗನುಗುಣವಾಗಿ ನುರಿತ ತಜ್ಞರು ನೀಡುವ ವೈದ್ಯಕೀಯ ಪರೀಕ್ಷೆಯ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಪರಿಗಣಿಸಲು ಸೂಚಿಸಿದೆ.