BIGG NEWS : ಹಾಲಿವುಡ್ ನ `ಓಪನ್ ಹೈಮರ್’ ಸಿನಿಮಾದಲ್ಲಿ ಸೆಕ್ಸ್ ವೇಳೆ `ಭಗವದ್ಗೀತೆ’ ಪಠಣ : ಭಾರತದಲ್ಲಿ ತೀವ್ರ ವಿವಾದ

ನವದೆಹಲಿ : ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಅವರ ಚಿತ್ರ ‘ಓಪನ್ ಹೈಮರ್’ ಶುಕ್ರವಾರ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಚಲನಚಿತ್ರದಲ್ಲಿ ಭಗವದ್ಗಿತೆಗೆ ಅಗೌರವ ತೋರಿದ್ದಾರೆ ಆರೋಪ ಕೇಳಿಬರುತ್ತಿದೆ.

ಸಿನಿಮಾದ ಒಂದು ದೃಶ್ಯದಲ್ಲಿ ಭಗವದ್ಗೀತೆ ಪಠಿಸುತ್ತಾ ಸಂಭೋಗ ನಡೆಸಲಾಗುತ್ತಿರುವ ದೃಶ್ಯಕ್ಕೆ ಆಕ್ಷೇಪ ವ್ಯಕ್ತವಾಗುತ್ತಿದ್ದು, ಭಾರತದಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಲಾಗುತ್ತಿದೆ.

ಓಪನ್ಹೈಮರ್ ಚಿತ್ರದಲ್ಲಿ ಅನೇಕ ಶ್ರೇಷ್ಠ ನಟರು ಹಾಲಿವುಡ್ನ ಪ್ರಸಿದ್ಧ ನಟ ಸಿಲಿಯನ್ ಮರ್ಫಿ, ರಾಬರ್ಟ್ ಡೌನ್ ಜೂನಿಯರ್ ಅವರೊಂದಿಗೆ ಕೆಲಸ ಮಾಡಿದ್ದಾರೆ. ಈ ಚಿತ್ರವು ವಿಶ್ವದ ಮೊದಲ ಪರಮಾಣು ಬಾಂಬ್ ಅನ್ನು ತಯಾರಿಸಿದ ವಿಜ್ಞಾನಿ ಜೆ ರಾಬರ್ಟ್ ಒಪೆನ್ಹೈಮರ್ ಅವರ ಜೀವನವನ್ನು ಆಧರಿಸಿದೆ. ಈ ಚಿತ್ರವು ಕೈ ಬರ್ಡ್ ಮತ್ತು ದಿವಂಗತ ಮಾರ್ಟಿನ್ ಜೆ ಶೆರ್ವಿನ್ ಅವರ ಪುಲಿಟ್ಜರ್ ಪ್ರಶಸ್ತಿ ವಿಜೇತ ಕಾದಂಬರಿ ಅಮೆರಿಕನ್ ಪ್ರೊಮೆಥಿಯಸ್ ನ ರೂಪಾಂತರವಾಗಿದೆ.

ಓಪರ್ ಹೈಮರ್ ಅವರು ಸಂಸ್ಕೃತ ಕಲಿತಿದ್ದರು. ಭಗವದ್ಗೀತೆಯಿಂದ ತೀರಾ ಪ್ರಭಾವಿತರಾಗಿದ್ದರು. ಇದೀಗ ಸಿನಿಮಾದಲ್ಲಿ ಓಪನ್ ಹೈಮರ್ ಪಾತ್ರಧಾರಿ ಸಿಲಿಯನ್ ಮರ್ಫಿ ಅವರು ಮನಃಶಾಸ್ತ್ರೆಜ್ಞೆ ಜೀನ್ ಟೈಟ್ಲರ್ ಜೊತೆಗೆ ಲೈಂಗಿಕ ಕ್ರಿಯೆ ನಡೆಸುತ್ತಿರುವಾಗ ಅವಳು ಸಂಸ್ಕೃತ ಪದ್ಯವನ್ನು ಓದುವಂತೆ ಕೇಳುತ್ತಾಳೆ. ಆಗ ಗೊಂದಲ್ಕೆ ಒಳಗಾದ ಓಪರ್ ಹೈಮರ್ ಸಂಸ್ಕೃತ ಶ್ಲೋಕಾ ಓದುತ್ತಾನೆ. ಅದು ಭಗವದ್ಗೀತೆಯ ಶ್ಲೋಕ ಎಂದು ಹೇಳಲಾಗಿದ್ದು, ಭಾರತದಲ್ಲಿ ತೀವ್ರ ವಿರೋಧಕ್ಕೆ ಕಾರಣವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read