ಬೆಂಗಳೂರು : ಇಂದು ಮಕ್ಕಳ ದಿನಾಚರಣೆ’. ಇದು ಮಕ್ಕಳಿಗೆ ಹೆಚ್ಚು ಪ್ರಿಯವಾದ ಆಚರಣೆಯಾಗಿದೆ, ಶಾಲಾ ಆಚರಣೆಗಳಿಂದ ಮೋಜಿನ ಚಟುವಟಿಕೆಗಳವರೆಗೆ, ಇದು ಸಂತೋಷದಿಂದ ತುಂಬಿದ ಸಮಯ. ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನವಾದ ನವೆಂಬರ್ 14 ಅನ್ನು ಮಕ್ಕಳ ದಿನವಾಗಿ ಆಚರಿಸಲಾಗುತ್ತದೆ.
ದೀಪಾವಳಿ ಹಬ್ಬದ ಹಿನ್ನೆಲೆ ನಾಳೆ ಸರ್ಕಾರಿ ರಜೆ ದಿನ ಇರುವುದರಿಂದ ಮಕ್ಕಳ ದಿನಾಚರಣೆಯನ್ನು ನಂತರದ ಶಾಲಾ ದಿನದಂದು ರಾಜ್ಯದ ಎಲ್ಲಾ ಶಾಲೆಗಳಲ್ಲಿ ಸರಳವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸುವಂತೆ ಸುತ್ತೋಲೆ ಹೊರಡಿಸಿದೆ.
ರಾಜ್ಯದ ಎಲ್ಲಾ ಶಾಲೆಗಳಲ್ಲಿ ರಾಷ್ಟ್ರೀಯ ಹಬ್ಬಗಳನ್ನು ಹಾಗೂ ಇನ್ನಿತರ ಪ್ರಮುಖ ಜಯಂತಿಗಳನ್ನು ಕಡ್ಡಾಯವಾಗಿ ಆಯಾ ದಿನಗಳಂದು ಗೌರವ ಪೂರ್ವಕವಾಗಿ ಆಚರಿಸತಕ್ಕದ್ದೆಂದು, ಮಾನ್ಯ ಆಯಕ್ತರ ಕಛೇರಿಯ ದಿನಾಂಕ 30-03-2023 ರ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಮುಂದುವರೆದು ಪ್ರತಿ ವರ್ಷ ನವೆಂಬರ್ 14 ರಂದು, ಭಾರತದ ಪ್ರಥಮ ಪಧಾನ ಮಂತ್ರಿಗಳಾದ ಈ ಬಾರಿ ನವಂಬರ್ 14, ಮಂಗಳವಾರ ಆಚರಿಸಬೇಕಾದ ಮಕ್ಕಳ ದಿನಾಚರಣೆಯ ದಿನದಂದು ಬಲಿಪಾಡ್ಯಮಿ ದೀಪಾವಳಿಯ ಪುಯುಕ್ತ ಸಾರ್ವತ್ರಿಕ ರಜೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಈ ಸಾಲಿನ ಮಕ್ಕಳ ದಿನಾಚರಣೆಯನ್ನು ನಂತರದ ಶಾಲಾ ದಿನದಂದು ರಾಜ್ಯದ ಎಲ್ಲಾ ಶಾಲೆಗಳಲ್ಲಿ ಸರಳವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಬೇಕು.
ಮಕ್ಕಳ ದಿನಾಚರಣೆಯು ಕೇವಲ ಸಾಂಕೇತಿಕ ಆಚರಣೆಯಲ್ಲ, ಇದು ದೇಶದ ಭವಿಷ್ಯತ್ತನ್ನು ರೂಪಿಸುವಲ್ಲಿ ಅತ್ಯಂತ ಮಹತ್ತರವಾದ ಆಚರಣೆಯಾಗಿದೆ. ಹಾಗಾಗಿ ನವೆಂಬರ್ 14 ರ ನಂತರದ ಶಾಲಾ ಕರ್ತವ್ಯದ ದಿನದಂದು, ಶಾಲಾ ಪ್ರಾರ್ಥನಾ ವೇಳೆಯಲ್ಲಿ ವಿದ್ಯಾರ್ಥಿಗಳಿಗೆ ಮಕ್ಕಳ ದಿನಾಚರಣೆಯ ಮಹತ್ವದ ಬಗ್ಗೆ ಅರಿವು ಮೂಡಿಸಲು ರಾಜ್ಯದ ಎಲ್ಲಾ ಶಾಲಾ ಮುಖ್ಯೋಪಾಧ್ಯಾಯರು ಗಮನ ಹರಿಸಬೇಕು.
ಮುಂದುವರೆದು, ಶಾಲೆಗಳಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳಿಗೆ ಆಟೋಟಗಳು, ಪ್ರಬಂಧ ಬರವಣಿಗೆ, ಭಾಷಣ, ಚಿತ್ರಕಲೆ, ಕೋಲಾಜ್ ಮೇಕಿಂಗ್, ಪಾತ್ರಾಭಿನಯ, ಸ್ವರಚಿತ ಕವನ, ಪತ್ರ ಲೇಖನ, ಛದ್ಮ ವೇಷ, ಆಶು ಭಾಷಣ, ಸಮೂಹ ಗಾಯನ, ಚರ್ಚಾ ಸ್ಪರ್ಧೆ, ಘೋಷಣಾ ವಾಕ್ಯ ಬರೆಯುವುದು, ಮುಂತಾದ ಚಟುವಟಿಕೆಗಳನ್ನು ಶಾಲಾ ಪಾಠ ಪ್ರವಚನಗಳಿಗೆ ತೊಂದರೆ ಉಂಟಾಗದಂತೆ ನಿರ್ವಹಿಸುವುದು.ಮೇಲೆ ತಿಳಿಸಲಾದ ಚಟುವಟಿಕೆಗಳು ಶಾಲೆಗಳಲ್ಲಿ ನಿರ್ವಹಿಸಬಹುದಾದ ಸಲಹಾತ್ಮಕ ಚಟುವಟಿಕೆಗಳಾಗಿರುತ್ತವೆ ಎಂದು ಸುತ್ತೋಲೆ ಹೊರಡಿಸಲಾಗಿದೆ.
ಮಕ್ಕಳ ಮೇಲಿನ ಪ್ರೀತಿಯಿಂದಾಗಿ ಅವರನ್ನು ‘ಚಾಚಾ ನೆಹರು’ ಎಂದು ಕರೆಯಲಾಗುತ್ತದೆ. ನೆಹರು ಭಾರತದ ಮೊದಲ ಪ್ರಧಾನಿಯಾಗಿದ್ದರು, ಮತ್ತು 1964 ರಲ್ಲಿ ಅವರು ನಿಧನರಾದ ನಂತರ, ಅವರ ಜನ್ಮ ದಿನಾಚರಣೆಯ ನೆನಪಿಗಾಗಿ ಮಕ್ಕಳ ದಿನವನ್ನು ನವೆಂಬರ್ 20 ರಿಂದ ನವೆಂಬರ್ 14 ಕ್ಕೆ ಸ್ಥಳಾಂತರಿಸಲಾಯಿತು.