
ಬೆಂಗಳೂರು : ಅಮೆರಿಕದಲ್ಲಿ ದಾವಣಗೆರೆಯ ಮೂವರು ಸಾವಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪತ್ನಿ ಹಾಗೂ ಪುತ್ರನನ್ನು ಗುಂಡಿಕ್ಕಿ ಕೊಂದು ಬಳಿಕ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಮೆರಿಕದ ಪೊಲೀಸರು ತನಿಖಾ ವರದಿ ಬಿಡುಗಡೆ ಮಾಡಿದ್ದಾರೆ.
ಆಗಸ್ಟ್ 15ರಂದು ರಾತ್ರಿ ಮಗು ಯಶ್ ಹಾಗೂ ಪತ್ನಿ ಪ್ರತಿಭಾಗೆ ಗುಂಡುಹಾರಿಸಿ ಪತಿ ಯೋಗೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾಲ್ಟಿಮೋರ್ ಪೊಲೀಸರು ಡಬಲ್ ಮರ್ಡರ್ ಮತ್ತು ಆತ್ಮಹತ್ಯೆಯನ್ನು ಶಂಕಿಸಲಾಗಿದ್ದರೂ, ಸಾವಿನ ಹಿಂದಿನ ಉದ್ದೇಶವನ್ನು ಇನ್ನೂ ನಿರ್ಧರಿಸಲಾಗಿಲ್ಲ ಬಾಲ್ಟಿಮೋರ್ ಪೊಲೀಸ್ ವಕ್ತಾರರು ಮಾತನಾಡಿ, ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ವ್ಯಕ್ತಿ ತನ್ನ ಪತ್ನಿ ಮತ್ತು ಮಗನನ್ನು ಜೋಡಿ ಕೊಲೆ ಮಾಡಿದ್ದಾನೆ. ಸಾವಿನ ಹಿಂದಿನ ಕಾರಣವನ್ನು ತನಿಖೆ ಮಾಡಲಾಗುತ್ತಿದೆ ಎಂದು ಹೇಳಿದರು.
ಯೋಗೇಶ್ ಕಳೆದ ಒಂಬತ್ತು ವರ್ಷಗಳಿಂದ ಯುಎಸ್ನಲ್ಲಿ ವಾಸಿಸುತ್ತಿದ್ದು, ಅವನು ಮತ್ತು ಅವನ ಪತ್ನಿ ಇಬ್ಬರೂ ಸಾಫ್ಟ್ವೇರ್ ಎಂಜಿನಿಯರ್ಗಳಾಗಿ ಕೆಲಸ ಮಾಡುತ್ತಿದ್ದರು ಎಂದು ವರದಿ ತಿಳಿಸಿದೆಮೃತ ವ್ಯಕ್ತಿಯ ಕುಟುಂಬ ಸದಸ್ಯರು ಈಗ ಮೃತ ದೇಹವನ್ನು ಸ್ವದೇಶಕ್ಕೆ ಕಳುಹಿಸಲು ಸಹಾಯ ಮಾಡುವಂತೆ ಭಾರತೀಯ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ದಾವಣಗೆರೆ ಜಿಲ್ಲೆಯ ಪೊಲೀಸ್ ಅಧಿಕಾರಿಯೊಬ್ಬರು ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.