‘ಬಿಗ್ ಬಾಸ್’ ಸ್ಪರ್ಧಿಯಾಗಿದ್ದ ನಟಿ ಮೇಲೆ ‘ಸ್ನೇಹಿತ’ನಿಂದಲೇ ಅತ್ಯಾಚಾರ: ಎಫ್‌ಐಆರ್ ದಾಖಲು

ನವದೆಹಲಿ: ಕಿರುತೆರೆ ನಟಿ ಮತ್ತು ‘ಬಿಗ್ ಬಾಸ್’ 11 ರ ಮಾಜಿ ಸ್ಪರ್ಧಿ ಮೇಲೆ ಸ್ನೇಹಿತ ಅತ್ಯಾಚಾರ ಎಸಗಿದ್ದು, ದಕ್ಷಿಣ ದೆಹಲಿಯ ಟಿಗ್ರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

2023 ರಲ್ಲಿ ರಾಷ್ಟ್ರ ರಾಜಧಾನಿಯ ಡಿಯೋಲಿ ರಸ್ತೆ ಪ್ರದೇಶದ ಫ್ಲಾಟ್‌ ನಲ್ಲಿ ಸ್ನೇಹಿತ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ನಟಿ ಆರೋಪಿಸಿದ್ದಾರೆ. ಆಕೆಯ ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ಕೂಡ ದಾಖಲಿಸಿಕೊಂಡಿದ್ದಾರೆ. ವಿಚಾರಣೆ ಪ್ರಗತಿಯಲ್ಲಿದೆ.

ನಟಿ ಮುಂಬೈ ನಿವಾಸಿಯಾಗಿದ್ದು ಮಾಡೆಲಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಅನೇಕ ದೂರದರ್ಶನ ಧಾರಾವಾಹಿಗಳಲ್ಲಿಯೂ ಕೆಲಸ ಮಾಡಿದ್ದಾರೆ. ತನ್ನ ಸ್ನೇಹಿತ ತನ್ನನ್ನು ದೆಹಲಿಯಲ್ಲಿರುವ ತನ್ನ ಮನೆಗೆ ಕರೆಸಿಕೊಂಡಿದ್ದ. ಅವಳು ಡಿಯೋಲಿ ರೋಡ್ ಪ್ರದೇಶದ ಫ್ಲಾಟ್ ಗೆ ಹೋದಾಗ ಅಮಲು ಪಾನೀಯ ನೀಡಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ದೂರು ನೀಡಿದ್ದು, ತನಿಖೆ ಆರಂಭವಾಗಿದೆ. ಆದಷ್ಟು ಬೇಗ ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳಲಾಗುವುದು ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read