alex Certify ‘ಬಿಗ್ ಬಾಸ್-10’ ವಿಶೇಷತೆ : ಮೊದಲ ಸ್ಪರ್ಧಿಯಾಗಿ ಮುದ್ದು ‘ಚಾರ್ಲಿ’ ಎಂಟ್ರಿ |BIGG BOSS-10 | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಬಿಗ್ ಬಾಸ್-10’ ವಿಶೇಷತೆ : ಮೊದಲ ಸ್ಪರ್ಧಿಯಾಗಿ ಮುದ್ದು ‘ಚಾರ್ಲಿ’ ಎಂಟ್ರಿ |BIGG BOSS-10

ಬೆಂಗಳೂರು : ಅಕ್ಟೋಬರ್ 8 ರಿಂದ ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 ಆರಂಭವಾಗಲಿದ್ದು, ಸ್ಪರ್ಧಿಗಳು ಯಾರೆಲ್ಲಾ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿದೆ.

ಬಹಳ ಕುತೂಹಲ ಮೂಡಿಸಿರುವ ಬಿಗ್ ಬಾಸ್-10ರ ಮೊದಲ ಸ್ಪರ್ಧಿಯಾಗಿ ಕೊಡ್ತಿದೆ ‘ಚಾರ್ಲಿ’ ಎಂಟ್ರಿ ಕೊಡ್ತಿರುವುದು ಈ ಬಾರಿಯ ವಿಶೇಷ.ರಕ್ಷಿತ್ ಶೆಟ್ಟಿ ಅಭಿನಯದ ‘777 ಚಾರ್ಲಿ’ ಸಿನಿಮಾದಲ್ಲಿ ಅದ್ಬುತವಾಗಿ ನಟಿಸಿದ್ದ ಚಾರ್ಲಿ ಈ ಬಿಗ್ ಬಾಸ್ ಮನೆಗೆ ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಡ್ತಿದೆ.

ಈ ಬಗ್ಗೆ ಕಲರ್ಸ್ ಸೂಪರ್ ವಾಹಿನಿ ಟ್ವೀಟ್ ಮಾಡಿದ್ದು, ಬೆಸ್ಟ್ ರೇಟೆಡ್ ಚಲನ ಚಿತ್ರ – ಚಾರ್ಲಿ. ಬಿಗ್ ಬಾಸ್ ಸೀಸನ್ 10 ಮೊದಲ ಕಂಟೆಸ್ಟೆಂಟ್ ಆಗಿ ಎಂಟ್ರಿ ಕೊಡ್ತಿರೋ ಚಾರ್ಲಿ!! ಅಭಿನಂದನೆಗಳು ಚಾರ್ಲಿ ಎಂದು ಪೋಸ್ಟ್ ಮಾಡಿದೆ. ಈ ಮೂಲಕ ಬಿಗ್ ಬಾಸ್ ಇನ್ನಷ್ಟು ಕುತೂಹಲ ಮೂಡಿಸಿದೆ.

ಅಕ್ಟೋಬರ್ 8 ರಿಂದ ಬಿಗ್ ಬಾಸ್ ಕನ್ನಡ 10 ಆರಂಭವಾಗಲಿದ್ದು, ಕಾರ್ಯಕ್ರಮದ ಪ್ರೋಮೋ ವನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ. ಈ ಬಾರಿ ಹೊಸ ಸೀಸನ್ ನಲ್ಲಿ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್, ‘ಗೀತಾ’ ಸೀರಿಯಲ್ ಖ್ಯಾತಿಯ ಭವ್ಯಾ ಗೌಡ, ‘ಲಕ್ಷಣ’ ಧಾರಾವಾಹಿ ನಟಿ ಸುಕೃತಾ ನಾಗ್, ಜೊತೆಜೊತೆಯಲಿ ಧಾರವಾಹಿ ಖ್ಯಾತಿಯ ಮೇಘಾ ಶೆಟ್ಟಿ, ಸೋಶಿಯಲ್ ಮೀಡಿಯಾ ಸ್ಟಾರ್ ಭೂಮಿಕಾ ಬಸವರಾಜ್, , ಡಾ. ಬ್ರೋ ಅವರ ಹೆಸರುಗಳು ಕೂಡ ಪ್ರಮುಖವಾಗಿ ಕೇಳಿಬಂದಿವೆ.ನಾಗಿಣಿ 2 ಖ್ಯಾತಿಯ ನಟಿ ನಮ್ರತಾ ಗೌಡ , ಹುಚ್ಚ ಚಿತ್ರದ ನಾಯಕಿ ರೇಖಾ , ವರ್ಷ ಕಾವೇರಿ, ಅಗ್ನಿಸಾಕ್ಷಿ ರಾಜೇಶ್, ಸೇರಿದಂತೆ ಹಲವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡ್ತಿದ್ದಾರೆ ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...