ನವದೆಹಲಿ : ಜನ ಸಾಮಾನ್ಯರಿಗೆ ಮತ್ತೊಂದು ಶಾಕ್ ಎದುರಾಗಿದ್ದು, ‘ಅಕ್ಕಿ’ ಬೆಲೆ ಭಾರಿ ಹೆಚ್ಚಳವಾಗಿದೆ. ದೇಶದ ಹಲವು ರಾಜ್ಯಗಳಲ್ಲಿ ಭಾರಿ ಮಳೆಯಿಂದ ಭತ್ತದ ಬೆಳೆ ನಾಶವಾದರೆ, ಕರ್ನಾಟಕದಲ್ಲಿ ನೀರಿನ ಅಭಾವದಿಂದ ಕೆಲವು ಜಿಲ್ಲೆಗಳಲ್ಲಿ ರೈತರು ಭತ್ತ ಬೆಳೆಯೋದನ್ನೇ ನಿಲ್ಲಿಸಿದ್ದಾರೆ.
ಈ ಎಲ್ಲಾ ಕಾರಣಗಳಿಂದ ದೇಶದಲ್ಲಿ ಅಕ್ಕಿ ಬೆಲೆ ಭಾರಿ ಏರಿಕೆಯಾಗಿದೆ. ಅಕ್ಕಿಯ ಬೆಲೆ ಕ್ವಿಂಟಾಲ್’ಗೆ 4,500 ರಿಂದ 5,000 ರೂಪಾಯಿ ಹೆಚ್ಚಳವಾಗಿದೆ. HMT, BPT ಮತ್ತು ಸೋನಮಸೂರಿ ಅಕ್ಕಿಯ ಬೆಲೆಗಳು ಪ್ರತಿ ಕ್ವಿಂಟಾಲ್ ಗೆ 1000 ರೂ.ಗಳಿಂದ 1500 ರೂ.ಗೆ ಏರಿದೆ ಎಂದು ಹೇಳಲಾಗಿದೆ. ಒಟ್ಟಾರೆಯಾಗಿ, ಸರಾಸರಿಯಾಗಿ ಅಕ್ಕಿ ಬೆಲೆ ಕ್ವಿಂಟಾಲ್ ಗೆ 1,000 ರೂ.ಗಳಷ್ಟು ಹೆಚ್ಚಾಗಿದ್ದು, ಆತಂಕಕ್ಕೆ ಕಾರಣವಾಗಿದೆ.