ನವದೆಹಲಿ : ವಿಮಾನ ಪ್ರಯಾಣಿಕರಿಗೆ ಬಿಗ್ ಶಾಕ್ ಎದುರಾಗಿದ್ದು, ಶೀಘ್ರದಲ್ಲೇ ಟಿಕೆಟ್ ಬೆಲೆಯೂ ಹೆಚ್ಚಳವಾಗಲಿದೆ ಎಂದು ಹೇಳಲಾಗಿದೆ.
ಸೆಪ್ಟೆಂಬರ್ 1 ರಂದು ಸರ್ಕಾರವು ಜೆಟ್ ಇಂಧನದ ಬೆಲೆಯಲ್ಲಿ ಶೇಕಡಾ 14 ರಷ್ಟು ಹೆಚ್ಚಳ ಮಾಡಿದ್ದು, ನಂತರ ವಿಮಾನ ಪ್ರಯಾಣವು ಹೆಚ್ಚು ದುಬಾರಿಯಾಗಬಹುದು ಎಂದು ಹೇಳಲಾಗಿದೆ.
ಕಳೆದ ಮೂರು ತಿಂಗಳಲ್ಲಿ, ಎಟಿಎಫ್ ಬೆಲೆಗಳು ಸರಿಸುಮಾರು 24 ಪ್ರತಿಶತದಷ್ಟು ಹೆಚ್ಚಾಗಿದೆ, ಇದು ವಿಮಾನಯಾನ ಸಂಸ್ಥೆಗಳ ನಿರ್ವಹಣಾ ವೆಚ್ಚದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ ಮತ್ತು ಹೆಚ್ಚಿನ ವಿಮಾನಯಾನ ದರಗಳಿಗೆ ಕಾರಣವಾಗಬಹುದು.ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳ ಪ್ರಕಾರ, ಸೆಪ್ಟೆಂಬರ್ 1 ರಂದು ಎಟಿಎಫ್ ಬೆಲೆ ಪ್ರತಿ ಕಿಲೋಲೀಟರ್ಗೆ 20,295.2 ರೂ.ಗೆ ಏರಿದೆ. ಇದರಿಂದ ಶೀಘ್ರದಲ್ಲೇ ಟಿಕೆಟ್ ಬೆಲೆಯೂ ಹೆಚ್ಚಳವಾಗಲಿದೆ ಎಂದು ಹೇಳಲಾಗಿದೆ.