ಭಾರತೀಯ ವಿದ್ಯಾರ್ಥಿಗಳಿಗೆ ಬ್ರಿಟನ್ ಸರ್ಕಾರ ದೊಡ್ಡ ಶಾಕ್ ಕೊಡಲು ಸಜ್ಜಾಗಿದೆ. ಸರ್ಕಾರದ ವಲಸೆ ಸಲಹಾ ಸಮಿತಿಯು ಪದವಿ ವೀಸಾ ಮಾರ್ಗವನ್ನು ಮುಚ್ಚಲು ಯೋಜಿಸಿದೆ. ಈ ನಿಬಂಧನೆಯನ್ನು ಜಾರಿಗೆ ತಂದ ತಕ್ಷಣ, ಪ್ರತಿ ವರ್ಷ ಸುಮಾರು 91 ಸಾವಿರ ಭಾರತೀಯ ವಿದ್ಯಾರ್ಥಿಗಳು ವೀಸಾ ಪ್ರವೇಶವನ್ನು ಪಡೆಯಲು ಸಾಧ್ಯವಾಗುವುದಿಲ್ಲ.
ಪ್ರತಿ ವರ್ಷ ಸುಮಾರು 1 ಲಕ್ಷ 30 ಸಾವಿರ ಭಾರತೀಯ ವಿದ್ಯಾರ್ಥಿಗಳು ಈ ಮೂಲಕ ಪ್ರವೇಶ ಪಡೆಯುತ್ತಾರೆ. ಈ ನೀತಿ ಜಾರಿಯಾದರೆ 39 ಸಾವಿರ ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪಡೆಯಲು ಸಾಧ್ಯವಾಗುತ್ತದೆ.
2021ರಲ್ಲಿ ಪರಿಚಯಿಸಲಾದ ಪದವಿ ವೀಸಾ ಮಾರ್ಗವು ಭಾರತೀಯ ಮತ್ತು ಇತರ ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ತಮ್ಮ ಸ್ನಾತಕೋತ್ತರ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ ಎರಡು ವರ್ಷಗಳವರೆಗೆ ಯುಕೆಯಲ್ಲಿ ವಾಸಿಸಲು ಮತ್ತು ಕೆಲಸ ಮಾಡಲು ಅನುಮತಿಸುತ್ತದೆ. 2025ರ ಜನವರಿಯಲ್ಲಿ ನಡೆಯಲಿರುವ ಬ್ರಿಟನ್ ಸಾರ್ವತ್ರಿಕ ಚುನಾವಣೆಯಲ್ಲಿ ಇದು ಪ್ರಮುಖ ವಿಷಯವಾಗಲಿದೆ.
ಸರ್ಕಾರದ ಈ ಯೋಜನೆ ಬ್ರಿಟನ್‌ನಲ್ಲಿ ನೆಲೆಸಿರುವ 25 ಲಕ್ಷ ಭಾರತೀಯ ಮತದಾರರ ಅಸಮಾಧಾನಕ್ಕೆ ಕಾರಣವಾಗಿದೆ. ಏಕೆಂದರೆ ಪದವಿ ವೀಸಾವನ್ನು ಪಡೆಯುವ ಸಿಕ್ಕರೆ ವಿದ್ಯಾರ್ಥಿಗಳ ವಲಸೆ ಹಕ್ಕು ಬಲಗೊಳ್ಳುತ್ತದೆ. ಎರಡು ವರ್ಷಗಳ ಅಧ್ಯಯನಕ್ಕಾಗಿ ಉಳಿಯಲು ವಿನಾಯಿತಿ ಸಿಗುತ್ತದೆ.
ಸುಮಾರು 80 ಪ್ರತಿಶತ ಭಾರತೀಯ ವಿದ್ಯಾರ್ಥಿಗಳು ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ಕಾನೂನು ಅಧ್ಯಯನ ಮಾಡಲು ಬ್ರಿಟನ್‌ಗೆ ಬರುತ್ತಾರೆ. ಅಧ್ಯಯನದ ನಂತರ ಅವರು ತಮ್ಮ ವಿಸ್ತೃತ ವಾಸ್ತವ್ಯದ ಸಮಯದಲ್ಲಿ ಉತ್ತಮ ವೇತನದ ಉದ್ಯೋಗ ಗಿಟ್ಟಿಸಿಕೊಳ್ಳುತ್ತಾರೆ. ವಿದ್ಯಾರ್ಥಿಗಳು ವಲಸೆ ಪಡೆಯಲು ಈ ವೀಸಾವನ್ನು ಬಳಸುತ್ತಾರೆ ಎಂಬುದು ಅಲ್ಲಿನ ಸಚಿವರುಗಳ ಅಭಿಪ್ರಾಯ.
ಮೂರು ವರ್ಷಗಳ ಹಿಂದೆ 6 ಲಕ್ಷ ವಿದ್ಯಾರ್ಥಿಗಳು ಇಲ್ಲಿ ಪ್ರವೇಶ ಪಡೆದಿದ್ದರು. ಹಾಗಾಗಿ ಇದು ಆರ್ಥಿಕತೆಯ ಮೇಲೂ ಪರಿಣಾಮ ಬೀರಲಿದೆ. ಭಾರತೀಯ ವಿದ್ಯಾರ್ಥಿಗಳು ಅಲ್ಲಿನ ವೈದ್ಯಕೀಯ, ಎಂಜಿನಿಯರಿಂಗ್ ಉದ್ಯೋಗಗಳಿಗೆ ಕೊಡುಗೆ ನೀಡುತ್ತಾರೆ. 2021ರಲ್ಲಿ ಬ್ರಿಟನ್‌ಗೆ ತೆರಳಿದ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ 87,045 ರಷ್ಟಿತ್ತು. 2022ರಲ್ಲಿ ಇದು 1,39,700ಕ್ಕೆ ಏರಿಕೆಯಾಗಿದೆ. 2023 ರಲ್ಲಿ 130,000 ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ಬ್ರಿಟನ್‌ಗೆ ತೆರಳಿದ್ದಾರೆ.
ಗ್ರಾಜ್ಯುಯೇಟ್ ರೂಟ್ ವೀಸಾ ಎಂದರೇನು ?
ಗ್ರಾಜುಯೇಟ್ ರೂಟ್ ವೀಸಾ ಮೂಲಕ ಬ್ರಿಟನ್‌ನಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಅಲ್ಲಿ ಕೆಲಸ ಮಾಡಲು, ವಾಸಿಸಲು ಅರ್ಜಿ ಸಲ್ಲಿಸಬಹುದು. ಈ ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಬ್ರಿಟನ್‌ನಲ್ಲಿ 2 ವರ್ಷಗಳ ಕಾಲ ಉಳಿಯಲು ಅವಕಾಶವಿರುತ್ತದೆ. ಆದರೆ ಪಿಎಚ್‌ಡಿ ವಿದ್ಯಾರ್ಥಿಗಳು 3 ವರ್ಷಗಳ ಕಾಲ ಉಳಿಯಲು ಅರ್ಜಿ ಸಲ್ಲಿಸಬಹುದು. ಗ್ರಾಜುಯೇಟ್ ರೂಟ್ ವೀಸಾವನ್ನು 2021 ರಲ್ಲಿ ಜಾರಿಗೆ ತರಲಾಗಿದೆ. ಈ ವೀಸಾ ಬದಲಾವಣೆ ಭಾರತೀಯ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ.