ನೆಲಮಂಗಲ: ಪ್ರವಾಸಿ ಮಂದಿರದಲ್ಲಿಯೇ ಪಿಡಬ್ಲ್ಯುಡಿ ಅಧಿಕಾರಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನೆಲಮಂಗಲದ ಶಿವಗಂಗೆಯಲ್ಲಿ ನಡೆದಿದೆ.
ಮಧುಗಿರಿ ನಿವಾಸಿ ಲಕ್ಷ್ಮಿನರಸಿಂಹಯ್ಯ (56) ಮೃತ ಅಧಿಕಾರಿ. ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಲಕ್ಷ್ಮಿನರಸಿಂಹಯ್ಯ, ಕಚೇರಿಗೆ ಸಂಬಂಧಿಸಿದ ಫೈಲ್ ಮಿಸ್ಸಿಂಗ್ ಆಗಿದೆ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಫೈಲ್ ಮಿಸ್ಸಿಂಗ್ ಆಗಿರುವ ಬಗ್ಗೆ ಕೆಲ ದಿನಗಳ ಹಿಂದೆ ಕುಟುಂಬದವರ ಜೊತೆಯೂ ಹೇಳಿದ್ದರಂತೆ. ಇದೀಗ ಏಕಾಏಕಿ ಶಿವಗಂಗೆಯ ಪ್ರವಾಸಿ ಮಂದಿರದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳಕ್ಕೆ ದಾಬಸ್ ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.