alex Certify BIG NEWS: ಉತ್ತರ ಕೊರಿಯಾ ಸರ್ವಾಧಿಕಾರಿಯ ಮತ್ತೊಂದು ಕ್ರೌರ್ಯ ಬಹಿರಂಗ; ಈ ಕಾರಣಕ್ಕೆ ಪ್ರತಿವರ್ಷ 25 ಕನ್ಯೆಯರನ್ನು ಆಯ್ಕೆ ಮಾಡ್ತಾನೆ ಕಿಮ್‌ ಜಾಂಗ್‌ ಉನ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಉತ್ತರ ಕೊರಿಯಾ ಸರ್ವಾಧಿಕಾರಿಯ ಮತ್ತೊಂದು ಕ್ರೌರ್ಯ ಬಹಿರಂಗ; ಈ ಕಾರಣಕ್ಕೆ ಪ್ರತಿವರ್ಷ 25 ಕನ್ಯೆಯರನ್ನು ಆಯ್ಕೆ ಮಾಡ್ತಾನೆ ಕಿಮ್‌ ಜಾಂಗ್‌ ಉನ್…!

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಕ್ರೌರ್ಯದ ಬಗ್ಗೆ ಬಹುತೇಕ ಎಲ್ಲರಿಗೂ ಗೊತ್ತು. ಇದೀಗ ಆತನ ಮತ್ತೊಂದು ಮುಖ ಬಯಲಾಗಿದೆ. ಕಿಮ್‌ ಜಾಂಗ್-ಉನ್ ತನ್ನ “ಪ್ಲೆಷರ್ ಸ್ಕ್ವಾಡ್”ಗಾಗಿ ಪ್ರತಿವರ್ಷ 25 ಕನ್ಯೆಯರನ್ನು ಹೇಗೆ ಆಯ್ಕೆ ಮಾಡುತ್ತಾನೆ ಎಂಬುದನ್ನು ಉತ್ತರ ಕೊರಿಯಾದ ಪ್ರಸಿದ್ಧ ಪಕ್ಷಾಂತರಿಯೊಬ್ಬರು ಬಹಿರಂಗಪಡಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಉತ್ತರ ಕೊರಿಯಾದಿಂದ ತಪ್ಪಿಸಿಕೊಂಡ ಯೆನ್ಮಿ ಪಾರ್ಕ್ ಎಂಬಾಕೆ ಈ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.

ಕಿಮ್‌ ಜಾಂಗ್‌, ಈ ಕನ್ಯೆಯರನ್ನು ಅವರ ಆಕರ್ಷಕ ನೋಟ ಮತ್ತು  ರಾಜಕೀಯ ನಿಷ್ಠೆಯ ಆಧಾರದ ಮೇಲೆ ಆಯ್ಕೆ ಮಾಡುತ್ತಾನಂತೆ. ಸ್ವತಃ ಯೆನ್ಮಿ ಕುಟುಂಬಸ್ಥರು ಎರಡು ಬಾರಿ ಈ ಪೈಪೋಟಿಯಲ್ಲಿದ್ದರು. ಆದರೆ ಅವರ “ಕುಟುಂಬ ಸ್ಥಿತಿ”ಯ ಕಾರಣದಿಂದಾಗಿ ಆಯ್ಕೆಯಾಗಲಿಲ್ಲವಂತೆ.

ಪ್ಲೆಷರ್‌ ಸ್ಕ್ವಾಡ್‌ಗೆ ಕೇವಲ ವರ್ಜಿನ್‌ ಹುಡುಗಿಯರನ್ನು ಮಾತ್ರ ಕಿಮ್‌ ಆಯ್ಕೆ ಮಾಡಿಕೊಳ್ತಾನೆ. ಅಭ್ಯರ್ಥಿಗಳನ್ನು ಗುರುತಿಸಲು ಅಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡ್ತಾರೆ. ಸುಂದರ ಹುಡುಗಿ ಕಂಡ‌ ತಕ್ಷಣ ಮೊದಲು ಆಕೆಯ ಕುಟುಂಬದ ಸ್ಥಿತಿಯನ್ನು ಪರಿಶೀಲಿಸುತ್ತಾರೆ. ಅವರು ಉತ್ತರ ಕೊರಿಯಾದಿಂದ ತಪ್ಪಿಸಿಕೊಂಡ ಕುಟುಂಬ ಸದಸ್ಯರೊಂದಿಗೆ ಅಥವಾ ದಕ್ಷಿಣ ಕೊರಿಯಾ ಸೇರಿದಂತೆ ಮತ್ತಿತರ ದೇಶಗಳಲ್ಲಿ ಸಂಬಂಧಿಕರನ್ನು ಹೊಂದಿದ್ದರೆ ಅಂಥವರಿಗೆ ಅವಕಾಶ ಸಿಗುವುದಿಲ್ಲ.

ಈ ಗುಂಪಿನ ಆಯ್ಕೆ ಪ್ರಕ್ರಿಯೆ ಕೂಡ ಸಮಾಜ ಒಪ್ಪುವಂತಿರುವುದಿಲ್ಲ. ಇಲ್ಲಿ ಕನ್ಯತ್ವವನ್ನು ಪರಿಶೀಲಿಸಲು ವೈದ್ಯಕೀಯ ಪರೀಕ್ಷೆಗಳನ್ನು ಒಳಗೊಂಡಂತೆ ಕಠಿಣ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಸಣ್ಣ-ಪುಟ್ಟ ಅಪೂರ್ಣತೆಗಳು, ಚರ್ಮದಲ್ಲಿನ ಬದಲಾವಣೆ ಕೂಡ ಅನರ್ಹತೆಗೆ ಕಾರಣವಾಗಬಹುದು. ಉತ್ತರ ಕೊರಿಯಾದಾದ್ಯಂತ ಶೋಧ ನಡೆಸಿ ಕೆಲವು ಹುಡುಗಿಯರನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ ಮತ್ತು ಅವರನ್ನು ಪ್ಯೊಂಗ್ಯಾಂಗ್‌ಗೆ ಸ್ಥಳಾಂತರಿಸಲಾಗುತ್ತದೆ. ಅಲ್ಲಿ ಅವರ ಏಕೈಕ ಕೆಲಸವೆಂದರೆ ಸರ್ವಾಧಿಕಾರಿಯ ಆಸೆಗಳನ್ನು ಪೂರೈಸುವುದು.

ಈ ಪ್ಲೆಷರ್‌ ಸ್ಕ್ವಾಡ್‌ ಸಂಸ್ಕೃತಿ ಇಂದು ನಿನ್ನೆಯದಲ್ಲ. 1970ರ ದಶಕದಲ್ಲಿ ಕಿಮ್ ಜಾಂಗ್‌ ಉನ್‌ ತಂದೆಯಿಂದಲೇ ಬಂದಿದ್ದು. ಆರಂಭದಲ್ಲಿ ಕಿಮ್ ಜೊಂಗ್-ಇಲ್ ತನ್ನ ತಂದೆ ಕಿಮ್ ಇಲ್-ಸುಂಗ್‌ನನ್ನು ಮೆಚ್ಚಿಸಲು ಮತ್ತು ಉತ್ತರಾಧಿಕಾರವನ್ನು ಭದ್ರಪಡಿಸಿಕೊಳ್ಳಲು ಈ ಪರಿಕಲ್ಪನೆಯನ್ನು ರೂಪಿಸಿದ್ದನಂತೆ. ಈ ತಂಡವು ಈಗ ವಿಕಸನಗೊಂಡಿದೆ, ಪ್ರತಿ ನಾಯಕನ ಆದ್ಯತೆಗಳನ್ನು ಪ್ರತಿಬಿಂಬಿಸುತ್ತದೆ. ಕಿಮ್ ಜೊಂಗ್-ಇಲ್ ಎತ್ತರದ ಮಹಿಳೆಯರಿಗೆ ಒಲವು ತೋರಿದರೆ, ಕಿಮ್ ಜಾಂಗ್-ಉನ್ ಹೆಚ್ಚು ತೆಳ್ಳಗಿನ ವ್ಯಕ್ತಿಗಳು ಮತ್ತು “ಪಾಶ್ಚಿಮಾತ್ಯ” ರಂತೆ ಕಾಣುವ ಕನ್ಯೆಯರಿಗೆ ಮಣೆ ಹಾಕುತ್ತಾನೆ.

“ಪ್ಲೆಷರ್ ಸ್ಕ್ವಾಡ್” ಅನ್ನು ಮೂರು ವಿಭಿನ್ನ ಗುಂಪುಗಳಾಗಿ ವಿಂಗಡಿಸಲಾಗಿದೆ. ಒಂದು ಗುಂಪು ಮಸಾಜ್‌ನಲ್ಲಿ ಪರಿಣತಿಯನ್ನು ಹೊಂದಿದೆ, ಇನ್ನೊಂದು ಕಿಮ್ ಜೊಂಗ್-ಉನ್ ಮತ್ತು ಅವರ ಸಹವರ್ತಿಗಳಿಗೆ ಮನರಂಜನೆಯನ್ನು ಒದಗಿಸುವಲ್ಲಿ ಪರಿಣತಿಯನ್ನು ಹೊಂದಿದೆ. “ಲೈಂಗಿಕ ಚಟುವಟಿಕೆಗಳ ವಿಭಾಗ” ಎಂದು ಕರೆಯಲ್ಪಡುವ ಮೂರನೇ ಗುಂಪು ಸರ್ವಾಧಿಕಾರಿ ಮತ್ತು ಇತರ ಅಧಿಕಾರಿಗಳೊಂದಿಗೆ ನಿಕಟ ಸಂಬಂಧಗಳನ್ನು ಹೊಂದಿದೆ.

ವಿಪರ್ಯಾಸವೆಂದರೆ ತಮ್ಮ ಹೆಣ್ಣುಮಕ್ಕಳನ್ನು ಈ ತಂಡಕ್ಕೆ ಸೇರಿಸಲು ಪೋಷಕರನ್ನು ಪ್ರೇರೇಪಿಸಲಾಗುತ್ತದೆ. ಸದಸ್ಯರು ತಮ್ಮ ಇಪ್ಪತ್ತರ ಮಧ್ಯಭಾಗವನ್ನು ತಲುಪಿದಾಗ ಸಾಮಾನ್ಯವಾಗಿ ನಾಯಕನ ಅಂಗರಕ್ಷಕರನ್ನು ಮದುವೆಯಾಗುತ್ತಾರೆ. ಪ್ರತಿ ಕನ್ಯೆಯ ನಡೆನುಡಿಯ ಮೇಲೆ ಕಿಮ್‌ ತಂಡ ಕಣ್ಣಿಡುತ್ತದೆ. ಉತ್ತರ ಕೊರಿಯಾದ ಗಣ್ಯ ವಲಯಗಳು ಈ ಹೆಣ್ಣುಮಕ್ಕಳ ಶೋಷಣೆ ಮಾಡುತ್ತವೆ.

ಕಿಮ್ ಜಾಂಗ್ ಉನ್‌ ತಂದೆಗೆ ಹದಿಹರೆಯದ ಹುಡುಗಿಯರೊಂದಿಗೆ ಲೈಂಗಿಕ ಅನ್ಯೋನ್ಯತೆಯನ್ನು ಹೊಂದುವುದರಿಂದ ಅಮರತ್ವ ಸಿಗುತ್ತದೆ ಎಂಬ ಭ್ರಮೆಯಿತ್ತು. ಆದರೆ ಆತ 2011 ರಲ್ಲಿ 70 ನೇ ವಯಸ್ಸಿನಲ್ಲಿ ತೀವ್ರ ಹೃದಯಾಘಾತದಿಂದ ಮೃತಪಟ್ಟ.

 

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...