ನವದೆಹಲಿ: ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್ಬಿಯು) ಮಾರ್ಚ್ 24 ಮತ್ತು 25 ರಂದು ರಾಷ್ಟ್ರವ್ಯಾಪಿ ಎರಡು ದಿನಗಳ ಮುಷ್ಕರಕ್ಕೆ ಕರೆ ನೀಡಿದ್ದು, ದಿನ ಬ್ಯಾಕಿಂಗ್ ಸೇವೆಯಲ್ಲಿ ವ್ಯತ್ಯಯವಾಗಲಿದೆ.
ಹೌದು, ಮಾ. 24, 25 ರಂದು ಬ್ಯಾಂಕ್ ಮುಷ್ಕರ ಖಚಿತವಾಗಿದ್ದು, ಬ್ಯಾಂಕುಗಳು ಸತತ ನಾಲ್ಕು ದಿನ ಬಂದ್ ಆಗಲಿದೆ. ಮಾರ್ಚ್ 22 ನಾಲ್ಕನೇ ಶನಿವಾರ, ಮಾರ್ಚ್ 23 ಭಾನುವಾರ, 24 ಮತ್ತು 25ರಂದು ಮುಷ್ಕರದ ಕಾರಣ ಸತತ ನಾಲ್ಕು ದಿನ ಬ್ಯಾಂಕುಗಳು ಬಂದ್ ಆಗಲಿದ್ದು, 4 ದಿನ ಬ್ಯಾಕಿಂಗ್ ಸೇವೆಯಲ್ಲಿ ವ್ಯತ್ಯಯವಾಗಲಿದೆ. ಎಲ್ಲಾ ಕೇಡರ್ಗಳಲ್ಲಿ ಉತ್ತಮ ನೇಮಕಾತಿ, ತಾತ್ಕಾಲಿಕ ಉದ್ಯೋಗಿಗಳನ್ನು ಖಾಯಂಗೊಳಿಸುವುದು ಮತ್ತು ಬ್ಯಾಂಕಿಂಗ್ ವಲಯದಲ್ಲಿ ವಾರಕ್ಕೆ ಐದು ದಿನಗಳ ಕೆಲಸದ ಅನುಷ್ಠಾನವನ್ನು ಜಾರಿಗೆ ತರುವಂತೆ ಒತ್ತಾಯಿಸಿದೆ.
ಬೇಡಿಕೆಗಳೇನು..?
ಸಿಬ್ಬಂದಿ ಕೊರತೆ ನೀಗಿಸಲು ಎಲ್ಲಾ ವೃಂದಗಳಲ್ಲಿ ನೇಮಕಾತಿ.
ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಕೆಲಸಗಾರರು ಮತ್ತು ಅಧಿಕಾರಿ ನಿರ್ದೇಶಕರ ಹುದ್ದೆಗಳನ್ನು ಭರ್ತಿ ಮಾಡುವುದು.
ಗ್ರಾಚ್ಯುಯಿಟಿ ಕಾಯ್ದೆಗೆ ತಿದ್ದುಪಡಿ, ಮಿತಿಯನ್ನು 25 ಲಕ್ಷ ರೂ.ಗೆ ಹೆಚ್ಚಿಸಬೇಕು, ಅದನ್ನು ಸರ್ಕಾರಿ ನೌಕರರ ಪ್ರಯೋಜನಗಳೊಂದಿಗೆ ಹೊಂದಿಸಬೇಕು.
ಆದಾಯ ತೆರಿಗೆಯಿಂದ ಗ್ರಾಚ್ಯುಟಿ ವಿನಾಯಿತಿ.
ತಮ್ಮ ವಿವಿಧ ಬೇಡಿಕೆಗಳ ಕುರಿತು ಭಾರತೀಯ ಬ್ಯಾಂಕ್ ಗಳ ಸಂಘ(IBA) ಜೊತೆ ನಡೆದ ಮಾತುಕತೆಯಲ್ಲಿ ಯಾವುದೇ ಫಲಿತಾಂಶ ಬಾರದ ಕಾರಣ ದೇಶಾದ್ಯಂತ ಮಾ. 24, 25ರಂದು ಬ್ಯಾಂಕ್ ಮುಷ್ಕರ ನಡೆಸುವುದು ನಿಶ್ಚಿತ ಎಂದು ಬ್ಯಾಂಕ್ ಯೂನಿಯನ್ ಸಂಯುಕ್ತ ವೇದಿಕೆ(UFBU) ತಿಳಿಸಿದೆ.ವಾರಕ್ಕೆ ಐದು ದಿನ ಕೆಲಸ, ಎಲ್ಲಾ ಸ್ತರಳಗಳಲ್ಲಿ ಹೆಚ್ಚಿನ ಸಿಬ್ಬಂದಿ ನೇಮಕ ಸೇರಿದಂತೆ ಪ್ರಮುಖ ಬೇಡಿಕೆಗಳ ಕುರಿತು ಐಬಿಎ ಜೊತೆಗೆ ನಡೆಸಿದ ಮಾತುಕತೆ ವಿಫಲವಾಗಿದೆ ಎಂದು ಬ್ಯಾಂಕ್ ನೌಕರರ ರಾಷ್ಟ್ರೀಯ ಒಕ್ಕೂಟ(NCBE) ಪ್ರಧಾನ ಕಾರ್ಯದರ್ಶಿ ಎಲ್. ಚಂದ್ರಶೇಖರ್ ತಿಳಿಸಿದ್ದಾರೆ.
UFBU 9 ಬ್ಯಾಂಕ್ ನೌಕರರ ಸಂಘಟನೆಗಳ ಒಕ್ಕೂಟವಾಗಿದೆ. ನೌಕರರ ಕಾರ್ಯಕ್ಷಮತೆ ಪರಿಶೀಲನೆಯನ್ನು ನಿಯಮಿತವಾಗಿ ಕೈಗೊಂಡು ಅದರ ಆಧಾರದ ಮೇಲೆ ಪ್ರೋತ್ಸಾಹಕ ನೀಡುವುದಾಗಿ ಹಣಕಾಸು ಸೇವೆಗಳ ಇಲಾಖೆ ತಿಳಿಸಿದೆ. ಇದರಿಂದ ನೌಕರರ ಉದ್ಯೋಗಕ್ಕೆ ರಕ್ಷಣೆ ಇಲ್ಲದಂತಾಗಿದೆ. ಇಂತಹ ಕ್ರಮ ಕೈಬಿಡಬೇಕೆಂದು ಒತ್ತಾಯಿಸಲಾಗಿದೆ.ಗ್ರಾಚುಟಿ ಮೊತ್ತ ಮಿತಿಯನ್ನು 25 ಲಕ್ಷ ರೂ.ಗೆ ಏರಿಸಬೇಕು. ಈ ವಿಷಯದಲ್ಲಿ ಬ್ಯಾಂಕ್ ನೌಕರರನ್ನು ಸರ್ಕಾರಿ ನೌಕರರ ಪರಿಗಣಿಸಬೇಕು. ಆದಾಯ ತೆರಿಗೆ ವಿನಾಯಿತಿ ನೀಡಬೇಕು ಎಂದು ಬೇಡಿಕೆ ಸಲ್ಲಿಸಲಾಗಿದೆ.