ಬೆಂಗಳೂರು: ವಿಧಾನಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ರಾಜ್ಯದಲ್ಲಿ ಕುರುಡು ಕಾಂಚಾಣದ ಸದ್ದು ಜೋರಾಗಿದ್ದು, ಚುನಾವನಾ ಆಯೋಗ ಈವರೆಗೆ ಬರೋಬ್ಬರಿ 15 ಕೋಟಿ ನಗದು ಹಾಗೂ 57.72 ಕೋಟಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದೆ.
ಈ ಕುರಿತು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಮನೋಜ್ ಕುಮಾರ್ ಮೀನಾ ತಿಳಿಸಿದ್ದು, ಚುನಾವಣಾ ಅಕ್ರಮಗಳ ಮೇಲೆ ನಿಗಾ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಪೊಲೀಸ್ ಇಲಾಖೆ 34.36 ಕೋಟಿ ರೂ ನಗದು, 530 ಕಿಜಿ ಮಾದಕ ವಸ್ತುಗಳು, 15 ಕೆಜಿ ಚಿನ್ನ, 135 ಕೆಜಿ ಬೆಳ್ಳಿ ವಸ್ತುಗಳನ್ನು ವಶಕ್ಕೆ ಪಡೆದಿದೆ. ಅಬಕಾರಿ ಇಲಾಖೆಯು 6.84 ಕೋಟಿ ಮೌಲ್ಯದ 138,847 ಲೀಟರ್ ಮದ್ಯ ಹಾಗೂ 43 ಕೆಜಿ ಮಾದಕ ವಸ್ತುಗಳನ್ನು ಜಪ್ತಿ ಮಾಡಿದೆ. ಆದಾಯ ತೆರಿಗೆ ಇಲಾಖೆ 1.16 ಕೊಟಿ ರೂ. ನಗದನ್ನು ವಶಕ್ಕೆ ಪಡೆದಿದೆ ವಾಣಿಜ್ಯ ಇಲಾಖೆ ಒಟ್ಟು 5.02 ಕೋಟಿ ಜಪ್ತಿ ಮಾಡಿದೆ ಎಂದು ವಿವರಿಸಿದ್ದಾರೆ.