BIG NEWS: ಹುಟ್ಟೂರು ಕಮಡೊಳ್ಳಿಯಲ್ಲಿ ಸಿಎಂ ಬೊಮ್ಮಾಯಿ ರೋಡ್ ಶೋ; ಜನರ ಪ್ರೀತಿಗೆ ಭಾವುಕರಾದ ಮುಖ್ಯಮಂತ್ರಿ

ಧಾರವಾಡ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮತದಾರರ ಮನಗೆಲ್ಲಲು ರಾಜಕೀಯ ಪಕ್ಷದ ನಾಯಕರು ನಾನಾ ಕಸರತ್ತು ನಡೆಸಿದ್ದಾರೆ. ಸಿಎಂ ಬಸಬರಾಜ್ ಬೊಮ್ಮಾಯಿ ತಮ್ಮ ಹುಟ್ಟೂರಿನಲ್ಲಿ ರೋಡ್ ಶೋ ನಡೆಸುವ ಮೂಲಕ ಮತ ಯಾಚನೆ ಮಾಡಿದ್ದಾರೆ.

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಕಮಡೊಳ್ಳಿ ಗ್ರಾಮದಲ್ಲಿ ರೋಡ್ ಶೋ ನಡೆಸಿದ ಸಿಎಂ ಬಸವರಾಜ್ ಬೊಮ್ಮಾಯಿ, ಹುಟ್ಟೂರು ಕಮಡೊಳ್ಳಿಯ ಹಲವು ಮನೆಗಳಿಗೆ, ಸಂಬಂಧಿಕರ ನಿವಾಸಕ್ಕೆ ಭೇಟಿ ನೀಡಿದರು. ಇಡೀ ಕಮಡೊಳ್ಳಿ ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿತ್ತು.

ಊರ ಮಗ, ರಾಜ್ಯದ ದೊರೆಯ ಆಗಮನದಿಂದ ಸಂತಸಗೊಂಡ ಜನರು ಅದ್ದೂರಿಯಾಗಿ ಸ್ವಾಗತಿಸಿದರು. ಜನರ ಪ್ರೀತಿ, ವಿಶ್ವಾಸ, ಆದರ ಕಂಡು ಸಿಎಂ ಬೊಮ್ಮಾಯಿ ಭಾವುಕರಾಗಿ ಕಣೀರಿಟ್ಟ ಘಟನೆ ನಡೆದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read