ಮೈಸೂರು: ಕೆ.ಎಸ್.ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ.
ಸ್ಯಾಂಟ್ರೋ ರವಿ ಪತ್ನಿ ಎನ್ನಲಾದ ಮಹಿಳೆಯಿಂದ ಮೈಸೂರು ದೇವರಾಜ ಪೊಲೀಸ್ ಠಾಣೆಯಲ್ಲಿ ಸ್ಯಾಂಟ್ರೋ ರವಿ ಹಾಗೂ ಪ್ರಕಾಶ್ ಎಂಬುವವರ ವಿರುದ್ಧ ಚೆಕ್ ಬುಕ್ ದುರುಪಯೋಗ, ವಂಚನೆ ಪ್ರಕರಣ ದಾಖಲಾಗಿದೆ.
2022ರಲ್ಲಿ ಸ್ಯಾಂಟ್ರೋ ರವಿ, ಪ್ರಕಾಶ್ ಎಂಬುವವರು ನನ್ನ ಎರಡು ಬ್ಯಾಂಕ್ ಚೆಕ್ ಬುಕ್ ಕಳುವು ಮಾಡಿದ್ದಾರೆ. ನನ್ನ ಸ್ಕೂಟರ್ ಡಿಕ್ಕಿಯಲ್ಲಿ ನನ್ನ ಸಹಿ ಇರುವ 2 ಚೆಕ್ ಬುಕ್ ಇಟ್ಟಿದ್ದೆ. ಆದರೆ ಆ ಚೆಕ್ ಬುಕ್ ಕದ್ದಿರುವ ಸ್ಯಾಂಟ್ರೋ ರವಿ ಅದನ್ನು ಬ್ಯಾಂಕ್ ಗೆ ಪ್ರೊಡ್ಯೂಸ್ ಮಾಡಿ ದುರ್ಬಳಕೆ ಮಾಡಿದ್ದಾರೆ ಎಂದು ದೂರಿದ್ದಾರೆ.
ಈ ಹಿನ್ನೆಲೆಯಲ್ಲಿ ಸ್ಯಾಂಟ್ರೋ ರವಿ ವಿರುದ್ಧ ಐಪಿಸಿ ಸೆಕ್ಷನ್ 465, 468, 420 ಸೇರಿದಂತೆ ವಿವಿಧ ಸೆಕ್ಷನ್ ಅಡಿಗಳಲ್ಲಿ ಪ್ರಕರಣ ದಾಖಲಾಗಿದೆ.