BIG NEWS: ಸಂಸತ್ ಭವನಕ್ಕೆ ಬಸವಣ್ಣನವರ ಅನುಭವ ಮಂಟಪವೇ ಮಾದರಿ; ರಾಹುಲ್ ಗಾಂಧಿ

ಬಾಗಲಕೋಟೆ: ದೇ ಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಬರಲು ಬಸವಣ್ಣನವರು ಕಾರಣ. ಕತ್ತಲು ಕವಿದಿದ್ದಾಗ ಬಸವಣ್ಣ ಬೆಳಕಾಗಿ ಬಂದರು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿಳಿಸಿದ್ದಾರೆ.

ಬಾಗಲಕೋಟೆಯ ಕೂಡಲಸಂಗಮದಲ್ಲಿ ಬಸವಣ್ಣ ಜಯಂತಿಯಲ್ಲಿ ಪಾಲ್ಗೊಂಡು ಮಾತನಾಡಿದ ರಾಹುಲ್ ಗಾಂಧಿ, ಕೂಡಲಸಂಗಮಕ್ಕೆ ಆಗಮಿಸಿದ್ದು ಖುಷಿಯಾಗಿದೆ. ಸಂಸತ್ ಭವನಕ್ಕೆ ಬಸವಣ್ಣನವರ ಅನುಭವ ಮಂಟಪವೇ ಮಾದರಿ. ಬಸವಣ್ಣನವರು ಸಮಾಜದಲ್ಲಿನ ಜಾತಿ ವ್ಯವಸ್ಥೆಯನ್ನು ತೊಡೆದು ಹಾಕಲು ಶ್ರಮಿಸಿದ್ದರು ಎಂದರು.

ತಮ್ಮ ಜೀವನದುದ್ದಕ್ಕೂ ಪ್ರಶ್ನೆಗಳನ್ನು ಮಾಡುತ್ತಲೇ ಬಂದರು. ಬಹಳಷ್ಟು ಜನರಿಗೆ ಸತ್ಯದ ಅರಿವಾಗುತ್ತದೆ. ಆದರೆ ಅದನ್ನು ಹೇಳುವುದಿಲ್ಲ. ಇಂದಿನ ಸಮಾಜದಲ್ಲಿ ಸತ್ಯ ಹೇಳುವುದೂ ಕೂಡ ಕಷ್ಟವಾಗಿದೆ. ಎಲ್ಲರೂ ಸತ್ಯ ಮಾರ್ಗದಲ್ಲಿ ನಡೆಯಬೇಕು. ಎಲ್ಲರನ್ನೂ ಗೌರವಿಸಿ ಎಂಬ ಸಂದೇಶವನ್ನು ಬಸವಣ್ಣ ಸಾರಿದರು ಎಂದು ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read