ಬೆಳಗಾವಿ: ಒಳ್ಳೆ ಉದ್ದೇಶಕ್ಕೆ ಲಕ್ಷ್ಮಣ ಸವದಿ ಅವರನ್ನು ಬಿಜೆಪಿ ಸರ್ಕಾರದಲ್ಲಿ ಡಿಸಿಎಂ ಮಾಡಿದರು. ಆದರೆ ಆತ ಪಂಚಾಯಿತಿಗೂ ಲಾಯಕ್ ಇಲ್ಲ ಅಂತ ಗೊತ್ತಿರಲಿಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ, ಲಕ್ಷ್ಮಣ ಸವದಿಗೆ ಬಿಜೆಪಿಯಲ್ಲಿ ಏನು ಅನ್ಯಾಯವಾಗಿತ್ತು. ಚುನಾವಣೆಯಲ್ಲಿ ಸೋತರೂ ಕೂಡ ಅವರಿಗೆ ಡಿಸಿಎಂ ಮಾಡಲಾಯಿತು. ಎಂ ಎಲ್ ಸಿ ಸ್ಥಾನ ನೀಡಲಾಯಿತು. ಆದರೂ ಪಕ್ಷಕ್ಕೆ ದ್ರೋಹ ಬಗೆದು ಕಾಂಗ್ರೆಸ್ ಗೆ ಸೇರ್ಪಡೆಯಾದರು ಎಂದು ಕಿಡಿಕಾರಿದ್ದಾರೆ.
ನಿಜವಾಗಿ ಅನ್ಯಾಯ ಆಗಿದ್ದು ಮಹೇಶ್ ಕುಮಟಳ್ಳಿ ಅವರಿಗೆ. ಅವರಿಗೆ ಸರ್ಕಾರದಲ್ಲಿ ಯಾವುದೇ ಸಚಿವ ಸ್ಥಾನ ಕೂಡ ಸಿಕ್ಕಿರಲಿಲ್ಲ. ಸವದಿ ಉದ್ದ ಅಂಗಿ ಹಾಕಿಕೊಂಡು ಬಂದ ಎಂದು ದೊಡ್ಡವನೆಂದು ತಿಳಿದು ಆತನಿಗೆ ಸ್ಥಾನ ಮಾನ ನೀಡಲಾಯಿತು. ಆದರೆ ಆತ ಯಾವುದಕ್ಕೂ ಲಾಯಕ್ಕಿರಲಿಲ್ಲ. ಸವದಿ ಶಕುನಿ ಕೆಲಸ ಮಾಡಿ ಯಡಿಯೂರಪ್ಪ ಹಾಗೂ ಹೈಕಾಂಡ್ ನಡಿವೆ ಒಡಕು ಮೂಡುವಂತೆ ಮಾಡಿದ ಎಂದು ಆರೋಪಿಸಿದ್ದಾರೆ.