alex Certify BIG NEWS: ವಿಶ್ವದ ಅತಿ ಹಿರಿಯ ವ್ಯಕ್ತಿ ಸಿಸ್ಟರ್ ಆಂಡ್ರೆ ಇನ್ನಿಲ್ಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವಿಶ್ವದ ಅತಿ ಹಿರಿಯ ವ್ಯಕ್ತಿ ಸಿಸ್ಟರ್ ಆಂಡ್ರೆ ಇನ್ನಿಲ್ಲ

ವಿಶ್ವದ ಅತಿ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ 118 ವರ್ಷದ ಫ್ರೆಂಚ್ ನನ್ Lucile Randon ವಿಧಿವಶರಾಗಿದ್ದಾರೆ. ಸಿಸ್ಟರ್ ಆಂಡ್ರೆ ಎಂಬ ಹೆಸರಿನಿಂದಲೂ ಇವರು ಪ್ರಖ್ಯಾತರಾಗಿದ್ದರು.

ದಕ್ಷಿಣ ಫ್ರಾನ್ಸ್ ನಲ್ಲಿ ಫೆಬ್ರವರಿ 11, 1904 ರಲ್ಲಿ ಜನಿಸಿದ್ದ ಇವರು ಎರಡು ವಿಶ್ವ ಯುದ್ಧಗಳಿಗೂ ಸಾಕ್ಷಿಯಾಗಿದ್ದರು. ಕಳೆದ ರಾತ್ರಿ ಮಲಗಿದ್ದ ಸ್ಥಳದಲ್ಲಿಯೇ ಅವರು ನಿಧನರಾಗಿದ್ದಾರೆ.

ಈ ಮೊದಲು ಜಪಾನಿನ ಕನೆ ತನಕಾ ವಿಶ್ವದ ಅತಿ ಹಿರಿಯ ವ್ಯಕ್ತಿ ಎಂದು ಗುರುತಿಸಲಾಗಿತ್ತು. ಹೀಗಾಗಿ ಸಿಸ್ಟರ್ ಆಂಡ್ರೆ ಅವರನ್ನು ಯುರೋಪಿನ ಅತಿ ಹಿರಿಯ ವ್ಯಕ್ತಿ ಎಂದು ಕರೆಯಲಾಗುತ್ತಿತ್ತು. 119 ವರ್ಷದ ತನಕಾ ಕಳೆದ ವರ್ಷ ವಿಧಿವಶರಾದ ಬಳಿಕ ಸಿಸ್ಟರ್ ಆಂಡ್ರೆ ಜಗತ್ತಿನ ಅತಿ ಹಿರಿಯ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...