ಬೆಂಗಳೂರು: ವಿಧಾನಸೌಧದಲ್ಲಿ 10.5 ಲಕ್ಷ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಸಹಾಯಕ ಇಂಜಿನಿಯರ್ ಜಗದೀಶ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇದರ ಬೆನ್ನಲ್ಲೇ ಎಇ ಜಗದೀಶ್ ಪರ ವಕೀಲ ರಾಜು ಇದು ಲಂಚ ಕೊಡಲೆಂದು ತೆಗೆದುಕೊಂಡು ಹೋಗುತ್ತಿದ್ದ ಹಣವಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
PWD ಎಇ ಜಗದೀಶ್ ಮೇಲೆ ಚೆಕ್ ಬೌನ್ಸ್ ಪ್ರಕರಣವಿತ್ತು. ಪ್ರಕರಣದ ಇತ್ಯರ್ಥಕ್ಕಾಗಿ ಅವರು ಬೆಂಗಳೂರಿಗೆ ಬರುವಾಗ ಹಣ ತಂದಿದ್ದರು. ಈ ವೇಳೆ ಅರ್ಜೆಂಟ್ ಆಗಿ ಅಧಿಕಾರಿಯೊಬ್ಬರನ್ನು ಭೇಟಿ ಮಾಡಬೇಕಿತ್ತು. ಹೀಗಾಗಿ ವಿಧಾನಸೌಧಕ್ಕೆ ತೆರಳಿದ್ದರು ಅಷ್ಟೇ ಹೊರತು ಯಾರಿಗೋ ಹಣ ನೀಡಬೇಕು ಎಂದು ತೆಗೆದುಕೊಂಡು ಹೋಗಿರಲಿಲ್ಲ ಎಂದು ತಿಳಿಸಿದ್ದಾರೆ.
ಡಿಸಿಪಿ ನಡೆಸಿದ ವಿಚಾರಣೆ ಬೇಳೆ ಜಗದೀಶ್ ಎಲ್ಲಾ ಮಾಹಿತಿ ನೀಡಿದ್ದಾರೆ. ಆದರೂ ಕರ್ನಾಟಕ ಪೊಲಿಸ್ ಕಾಯ್ದೆಯಡಿ ಕೇಸ್ ದಾಖಲಿಸಿದ್ದಾರೆ. ಈ ರೀತಿ ಕೇಸ್ ದಾಖಲಿಸಲು ಕೋರ್ಟ್ ಅನುಮತಿ ಪಡೆದಿರಬೇಕು. ಆದರೆ ಕೋರ್ಟ್ ಅನುಮತಿ ಪಡೆಯದೆ ಕೇಸ್ ದಾಖಲು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.