BIG NEWS: ವಿಧಾನಸಭಾ ಚುನಾವಣೆ; ರಾಜ್ಯ ಬಿಜೆಪಿಯ 12 ನಾಯಕರಿಗೆ ಜವಾಬ್ದಾರಿ ವಹಿಸಿದ ಹೈಕಮಾಂಡ್

ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ರಾಜ್ಯದ 12 ನಾಯಕರಿಗೆ ಜಿಲ್ಲಾ ಮಟ್ಟದಲ್ಲಿ ಸಂಘಟನೆ ಜವಾಬ್ದಾರಿ ವಹಿಸಿದೆ.

ಈ ಮೂಲಕ ರಾಜ್ಯ ನಾಯಕರಿಗೆ ಗ್ರೌಂಡ್ ಲೆವಲ್ ಜವಾಬ್ದಾರಿಯನ್ನು ಹಂಚಿಕೆ ಮಾಡಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯ ಸಹ ಉಸ್ತುವಾರಿ ಡಿ.ಕೆ.ಅರುಣಾ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಚಿವರಾದ ಆರ್.ಅಶೋಕ್, ಗೋವಿಂದ ಕಾರಜೋಳ, ಡಾ.ಅಶ್ವತ್ಥನಾರಾಯಣ, ಬಿ.ಶ್ರೀರಾಮುಲು, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಡಿ.ವಿ.ಸದಾನಂದಗೌಡ, ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಮತ್ತು ಬಿಜೆಪಿ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾಗೆ ಜವಾಬ್ದಾರಿ ನೀಡಲಾಗಿದೆ.

12 ಜನರನ್ನು 5 ತಂಡಗಳನ್ನಾಗಿ ಮಾಡಿ ಜಿಲ್ಲೆಗಳನ್ನು ಹಂಚಿಕೆ ಮಾಡಲಾಗಿದೆ. ಈ ತಂಡಗಳು ಜಿಲ್ಲೆಯಲ್ಲಿನ ಅಸಮಾಧಾನ ಶಮನ, ಬಿಜೆಪಿ ಹಾಗೂ ಆರ್ ಎಸ್ ಎಸ್ ಕಾರ್ಯಕರ್ತರ ನಡುವಿನ ಸಮನ್ವಯತೆ, ಟಿಕೆಟ್ ಆಕಾಂಕ್ಷಿಗಳ ನಡುವಿನ ಅಸಮಾಧಾನ, ಪ್ರಚಾರಕ್ಕೆ ಬೇಕಿರುವ ಸಂಘಟನಾ ಸಮನ್ವಯತೆ, ಆಕಾಂಕ್ಷಿಗಳ ಪಟ್ಟಿ ರಾಜ್ಯ ಘಟಕಕ್ಕೆ ಸಲ್ಲಿಕೆ ಜವಾಬ್ದಾರಿಗಳನ್ನು ನಿರ್ವಹಿಸಲಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read