ಹುಬ್ಬಳ್ಳಿ: ಹೊಸದಾಗಿ ಆರಂಭವಾಗಿರುವ ಲಿಂಗಾಯಿತ ವೇದಿಕೆ ವಿಚಾರವಾಗಿ ಗರಂ ಆಗಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಇದೊಂದು ಕಾಲ್ಪನಿಕ ಸಂಘಟನೆ ಎಂದು ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ನಾಲ್ಕು ಜನ ಸೇರಿ ಏನೋ ಹೇಳಿದರೆ ಲಿಂಗಾಯಿತರ ಧ್ವನಿಯಾಗುತ್ತಾ? ಲಿಂಗಾಯಿತ ಸಮುದಾಯ ಸಮುದ್ರವಿದ್ದಂತೆ ಎಂದು ಹೇಳಿದರು.
ಲಿಂಗಾಯಿತ ವೇದಿಕೆ ಎಂಬುದು ಚುನಾವಣೆ ವೇಳೆ ಹುಟ್ಟಿಕೊಂಡ ಸಂಘಟನೆ . ಇದು ಒಂದು ಕಾಲ್ಪನಿಕ ಸಂಘಟನೆ ಎಂದು ತಿಳಿಸಿದರು.