
ಅಥಣಿ: ವಿಧಾನಸಭಾ ಚುನಾವಣೆ ಅಖಾಡ ರಂಗೇರಿದ್ದು, ಅಥಣಿ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ, ಮಾಜಿ ಡಿಸಿಎಂ, ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ ಸವದಿಗೆ ಸವಾಲು ಹಾಕಿದ್ದಾರೆ.
ಅಥಣಿಯಲ್ಲಿ ಚುನಾವಣಾ ಪ್ರಚಾರ ನಡೆಸಿದ ಮಹೇಶ್ ಕುಮಟಳ್ಳಿ, ಲಕ್ಷ್ಮಣ ಸವದಿ ವಿರುದ್ಧ ವಾಗ್ದಾಳಿ ನಡೆಸಿದರು. ನಿಮ್ಮ ಉಪಕಾರ ನಮ್ಮ ಮೇಲಿಲ್ಲ, ನಾವು ಘಂಟಾಘೋಷವಾಗಿ ಹೇಳಬೇಕಾಗುತ್ತದೆ. ನಮ್ಮಿಂದ ನೀವು ಇಂದು ಎಂಎಲ್ ಸಿ ಆದ್ರಿ. ರಾಜ್ಯದ ಡಿಸಿಎಂ ಆದ್ರಿ. ಆದರೆ ನನ್ನ ವಿರುದ್ಧ 50 ಕೋಟಿ ಆರೋಪ ಮಾಡಿದ್ದಿರಿ. ಇದಕ್ಕೆ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಕಿಡಿಕಾರಿದರು.
50 ಕೋಟಿ ಕೊಟ್ಟಿದ್ದು ನಿಜವೇ ಆಗಿದ್ದರೆ ನೀವೇ ಸಮಯ ನಿಗದಿ ಮಾಡಿ, ಸಿದ್ದೇಶ್ವರ ದೇವಸ್ಥಾನಕ್ಕೆ ಬರಲು ನಾನು ತಯಾರಿದ್ದೇನೆ. ಒಂದು ವೇಳೆ ನೀವು ಬಾರದಿದ್ದರೂ ನಾನೇ ಹೋಗಿ ದೇವಸ್ಥಾನದಲ್ಲಿ ಕಾಲು ಬಿದ್ದು ಬರುವೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಆಣೆ ಪ್ರಮಾಣದ ಸವಾಲು ಹಾಕಿದ್ದಾರೆ.