BIG NEWS: ಮಳೆಯಿಂದ ಮುಳುಗಿದ ದಶಪಥ ರಸ್ತೆ; ದೋಣಿಗೂ ಟೋಲ್ ದರ ನಿಗದಿ ಮಾಡಿ ಎಂದು ಕೈ ಪಡೆಯಿಂದ ಲೇವಡಿ; ಮೋದಿ ರೋಡ್‌ ಷೋ ಕಾರಿನಲ್ಲೋ, ಬೋಟಿನಲ್ಲೋ ಅವರೇ ನಿರ್ಧರಿಸಲಿ ಎಂದು ಟಾಂಗ್

ಬೆಂಗಳೂರು: ಬೆಂಗಳೂರು-ಮೈಸೂರು ದಶಪಥ ರಸ್ತೆಯ ಕ್ರೆಡಿಟ್ ತೆಗೆದುಕೊಳ್ಳುತ್ತಿರುವ ಪುಣ್ಯಾತ್ಮರೆಲ್ಲ ಹೆದ್ದಾರಿ ಜಲಾವೃತವಾಗಿರುವ ಬಗ್ಗೆ ಮಾತನಾಡಬೇಕು ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.

ದುಬಾರಿ ಟೋಲ್ ಮಾತ್ರ ಬೇಕು ಆದರೆ ಅದಕ್ಕೆ ತಕ್ಕ ಸೇವೆ ಒದಗಿಲು ಸಾಧ್ಯವಿಲ್ಲ, ಪ್ರಯಾಣಿಕರ ಜೀವವನ್ನು ಬಿಜೆಪಿಯ 40% ವ್ಯವಹಾರ ಪಣಕ್ಕಿಟ್ಟಿದೆ. ಭ್ರಷ್ಟಾಚಾರ ಬಿಟ್ಟರೆ ನಿಮ್ಮ ಕೊಡುಗೆ ಏನಿದೆ ? ಎಂದು ಪ್ರಶ್ನಿಸಿದೆ.

ವಾರದ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರಿಂದ ಉದ್ಘಾಟನೆಯಾದ ಪ್ರಪಂಚದಲ್ಲಿ ಎಲ್ಲಿಯೂ ಕಾಣಸಿಗದಂತ, ಬಿಜೆಪಿಯ ಅಭಿವೃದ್ಧಿಯ ದ್ಯೋತಕವಾದ ಏಕೈಕ ಹೈ-ಫೈ ಬೆಂಗಳೂರು-ಮೈಸೂರು ದುಬಾರಿ ಟೋಲ್ ರಸ್ತೆಯು ಒಂದು ಮಳೆಗೆ ಸೃಷ್ಟಿಸಿದ ಅವಾಂತರವಿದು. ಎಂದು ವಿಡಿಯೋ ಮೂಲಕ ಕಾಂಗ್ರೆಸ್ ಟ್ವೀಟ್ ಮಾಡಿದೆ.

ಈ ಅವೈಜ್ಞಾನಿಕ ಕಾಮಗಾರಿಗೆ ಈಗ ಯಾರು ಹೊಣೆ ಹೊರುತ್ತೀರಿ ? ಪ್ರಧಾನಿ ಮೋದಿಯವರಾ ಅಥವಾ ಸಂಸದ ಪ್ರತಾಪ್ ಸಿಂಹ ಅವರಾ ? ಎಂದು ಕೇಳಿದೆ

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ದೋಣಿಗಳಿಗೆ ಟೋಲ್ ಎಷ್ಟು ? ಯಾವುದಕ್ಕೂ ದೋಣಿಗಳಿಗೂ ಟೋಲ್ ದರ ನಿಗದಿ ಮಾಡುವುದು ಉತ್ತಮ. ಒಂದು ಸಾಧಾರಣ ಮಳೆಗೆ ರಸ್ತೆ ಮುಳುಗುತ್ತಿದೆ ಎಂದರೆ 40% ಲೂಟಿಯಲ್ಲಿ ಅದೆಷ್ಟು ಕಳಪೆ ಕಾಮಗಾರಿಯಾಗಬಹುದು ? ಪ್ರತಾಪ್ ಸಿಂಹ ಅವರೇ ಈಗ ಫೇಸ್ ಬುಕ್ ಲೈವ್ ಮಾಡುವುದಿಲ್ಲವೇ ? ಸೆಲ್ಫೀ ತೆಗೆಯುವುದಿಲ್ಲವೇ ? ಎಂದು ಟೀಕಿಸಿದೆ

ಸಣ್ಣ ಮಳೆಗೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅವಾಂತರ ಸೃಷ್ಟಿಯಾಗಿದೆ ಅಂದರೆ ಇದು ಅವೈಜ್ಞಾನಿಕವಾಗಿರುವ ಭ್ರಷ್ಟಪಥವಲ್ಲವೇ ? ನರೇಂದ್ರ ಮೋದಿಯವರು ಈಗ ಬಂದು ರೋಡ್ ಶೋ ಮಾಡಬೇಕು ಎಂದು ಕಾಂಗ್ರೆಸ್ ಆಹ್ವಾನಿಸಿದೆ. ಆದರೆ ರೋಡ್ ಶೋ ಕಾರಿನಲ್ಲಿ ಮಾಡುವರೋ ಬೋಟಿನಲ್ಲಿ ಮಾಡುವರೋ ಅವರೇ ನಿರ್ಧರಿಸಲಿ ಎಂದು ಲೇವಡಿ ಮಾಡಿದೆ.

https://twitter.com/INCKarnataka/status/1637051622034669568

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read