ಇತ್ತೀಚೆಗಷ್ಟೇ ಅಮೆಜಾನ್ ಸಿಇಒ ಆಂಡಿ ಜೆಸ್ಸಿ, ಜಾಗತಿಕವಾಗಿ 18,000 ಉದ್ಯೋಗಿಗಳನ್ನು ಮನೆಗೆ ಕಳುಹಿಸಲಾಗುತ್ತದೆ ಎಂದು ಹೇಳಿದ್ದರು. ಇದು ಭಾರತದ ಅಮೆಜಾನ್ ಉದ್ಯೋಗಿಗಳ ಮೇಲು ಪರಿಣಾಮ ಬೀರಲಿದ್ದು, ಸಾವಿರಕ್ಕೂ ಅಧಿಕ ಮಂದಿಗೆ ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಿದೆ.
ಆರ್ಥಿಕ ಹಿಂಜರಿತ ಹಾಗೂ ಉದ್ಯೋಗಿಗಳ ಸಂಖ್ಯೆಯಲ್ಲಿನ ಹೆಚ್ಚಳದ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗುತ್ತಿದೆ ಎಂದು ಆಂಡಿ ಜೆಸ್ಸಿ ಹೇಳಿದ್ದು, ತಮ್ಮ ಉದ್ಯೋಗಿಗಳಿಗೆ ಈ ಕುರಿತಂತೆ ಇ ಮೇಲ್ ಸಂದೇಶ ಕಳುಹಿಸಿದ್ದರು. ಇದೀಗ ಇದಕ್ಕೆ ಪೂರಕವಾಗಿ ಉದ್ಯೋಗಿಗಳನ್ನು ಮನೆಗೆ ಕಳುಹಿಸುವ ಕಾರ್ಯ ನಡೆಯುತ್ತಿದೆ ಎನ್ನಲಾಗಿದೆ.
ಈಗಾಗಲೇ ಹಲವು ಕಂಪನಿಗಳು ಉದ್ಯೋಗ ಕಡಿತಗೊಳಿಸುತ್ತಿದ್ದು, ಈ ಪಟ್ಟಿಗೆ ಈಗ ಅಮೆಜಾನ್ ಕೂಡ ಸೇರ್ಪಡೆಗೊಂಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಂಪನಿಗಳು ಇದೆ ದಾರಿ ಅನುಸರಿಸಲಿವೆ ಎನ್ನಲಾಗುತ್ತಿದ್ದು, ಹೀಗಾಗಿ ಉದ್ಯೋಗಿಗಳಲ್ಲಿ ಆತಂಕ ಶುರುವಾಗಿದೆ.