ರಾಮನಗರ: ಮಾರ್ಚ್ 12ರಂದು ಉದ್ಘಾಟನೆಗೊಂಡಿದ್ದ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಟೋಲ್ ಸಂಗ್ರಹ ಇಂದಿನಿಂದ ಆರಂಭವಾಗಿದ್ದು, ಹೈವೆಯಲ್ಲಿ ಸಂಚರಿಸುವ ವಾಹನಗಳಿಗೆ ಜೇಬಿಗೆ ಕತ್ತರಿ ಬೀಳುತ್ತಿದೆ.
ಯಾವುದಕ್ಕೆ ಎಷ್ಟು ಶುಲ್ಕ?
ಕಾರು, ಜೀಪ್, ವ್ಯಾನ್ ಗೆ ಏಕಮುಖ ಸಂಚರಕ್ಕೆ 135 ರೂ. ಎರಡು ಕಡೆ ಸಂಚಾರಕ್ಕೆ 205 ರೂ.
ಸ್ಥಳೀಯ ವಾಹನಗಳ ಏಕಮುಖ ಸಂಚಾರಕ್ಕೆ 70 ರೂ
ಕಾರು, ಜೀಪ್ ವ್ಯಾನ್ ಗಳಿಗೆ ತಿಂಗಳ ಪಾಸ್ ಗೆ 4,425 ರೂ
ಲಘು ಸರಕು ವಾಹನ, ಮಿನಿ ಬಸ್ ಗಳ ಏಕಮುಖ ಸಂಚಾರಕ್ಕೆ 220 ರೂ. ಎರಡೂ ಕಡೆ ಸಂಚಾರಕ್ಕೆ 330 ರೂ
ಲಘು ಸರಕು ವಾಹನಗಳಿಗೆ ತಿಂಗಳ ಪಾಸ್ ದರ 7,315 ರೂ
ಟ್ರಕ್, ಬಸ್ ಏಕಮುಖ ಸಂಚಾರಕ್ಕೆ ಟೋಲ್ ದರ 460 ರೂ. ಎರಡೂ ಕಡೆ ಸಂಚಾರಕ್ಕೆ 690 ರೂ
ಟ್ರಕ್ ಬಸ್ ಗಳ ತಿಂಗಳ ಟೋಲ್ ಪಾಸ್ ದರ 15,325 ರೂ
ಆಕ್ಸೆಲ್ ವಾಣಿಜ್ಯ ವಾಹನ ಏಕಮುಖ ಸಂಚಾರ 500 ರೂ. ಎರಡು ಕಡೆ ಸಂಚಾರಕ್ಕೆ 750 ರೂ
ಅತಿ ಬಾರದ ವಾಹನ ಏಕಮುಖ ಸಂಚಾರಕ್ಕೆ 880 ರೂ ನಿಗದಿ. ಎರಡೂ ಕಡೆ ಸಂಚಾರಕ್ಕೆ 1315 ರೂ ನಿಗದಿ ಮಾಡಲಾಗಿದೆ.