ಬೆಳಗಾವಿ: ಮಳೆ ಕೊರತೆಯಿಂದಾಗಿ ಘಟಪ್ರಭಾ ನಯ ಒಡಲು ಸಂಪೂರ್ಣ ಬರಿದಾಗಿದ್ದು, ಜಲಚರಗಳು ಸಾವನ್ನಪ್ಪುತ್ತಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ಬಳಿ ನಡೆದಿದೆ.
ಘಟಪ್ರಭಾ ನದಿ ನೀರಿಲ್ಲದೇ ಬತ್ತಿ ಹೋಗಿದ್ದು, ಮೀನುಗಳು, ಜಲಚರಗಳು ಸಾವನ್ನಪ್ಪುತ್ತಿವೆ. ಗೋಕಾಕ್ ತಾಲೂಕಿನ ನಲ್ಲಾನಟ್ಟಿ, ಬಳೋಬಾರ, ಬೀರನಹಟ್ಟಿ ಗ್ರಾಮದ ಬಳಿ ಮೀನುಗಳ ಮಾರಣಹೋಮವೇ ನಡೆದಿದೆ.
ಮೀನುಗಳು ಸಾವನ್ನಪ್ಪುತ್ತಿರುವುದರಿಂದ ದುರ್ವಾಸನೆ ಬರುತ್ತಿದ್ದು, ಗ್ರಾಮಗಳಲ್ಲಿ ರೋಗಗಳು ಹರಡುವ ಭೀತಿ ಶುರುವಾಗಿದೆ.